ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಅ.23ರಂದು ನಡೆದಿದ್ದ ಕಾರು ಬಾಂಬ್ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಎಂಟು ಜಿಲ್ಲೆಗಳ 40 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.
Advertisement
ಚೆನ್ನೈ, ಕೊಯಮತ್ತೂರು, ತಿರುವಳ್ಳೂರ್, ತಿರುಪ್ಪೂರ್, ನೀಲಗಿರಿ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಶೋಧ ನಡೆಸಲಾಗಿದೆ.
ಕೇರಳ ಜಿಲ್ಲೆಯ ಪಾಲಕ್ಕಾಡ್‌ನಲ್ಲಿಯೂ ಶೋಧ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಘಟನೆಯಲ್ಲಿ ಮೃತಪಟ್ಟ ಜಮೇಶಾ ಮೊಬೇನ್ ಉಗ್ರ ಸಂಘಟನೆ ಐಸಿಸ್ ಜತೆಗೆ ಗುರುತಿಸಿಕೊಂಡಿದ್ದ. ಆತ ಆಯ್ದ ದೇಗುಲಗಳ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.