Advertisement

ಕೊಯಮತ್ತೂರು ಸ್ಫೋಟ: ಜಿಹಾದ್‌ ಬೆಂಬಲಿಸುವ ದಾಖಲೆಗಳ ವಶ

06:21 PM Nov 03, 2022 | Team Udayavani |

ಚೆನ್ನೈ: ಕೊಯಮತ್ತೂರಿನಲ್ಲಿ ಅ.23ರಂದು ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಎನ್‌ಐಎಗೆ ಲಭ್ಯವಾಗಿದೆ.

Advertisement

ಅದರಲ್ಲಿ ಜಿಹಾದ್‌ ಅನ್ನು ನಡೆಸಲೇಬೇಕು ಎಂಬ ಅಂಶಗಳನ್ನು ಪುಷ್ಟೀಕರಿಸುವ ದಾಖಲೆಗಳು ಇವೆ ಎಂದು ಹೇಳಲಾಗಿದೆ. ಮಕ್ಕಳು, ಹಿರಿಯರು ದುರ್ಬಲರು ಹೀಗಾಗಿ, ಜಿಹಾದ್‌ ನಡೆಸಲೇಬೇಕು ಎಂದು ಅವುಗಳಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್‌ ನೌ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.

ಸ್ಫೋಟದಲ್ಲಿ ಅಸುನೀಗಿರುವ ಜಮೇಶ ಮುಂಬಿನ್‌ ಎಂಬಾತನ ನಿವಾಸದಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಲಭ್ಯವಾದ ಕೆಲವು ದಾಖಲೆಗಳಲ್ಲಿ ಅವುಗಳೂ ಸೇರಿವೆ. ಜತೆಗೆ  ಕೆಲವು ಚಿತ್ರಗಳೂ ಲಭ್ಯವಾಗಿದೆ. ದಾಖಲೆಗಳಲ್ಲಿ ಮುಸ್ಲಿಮರು, ಮುಸ್ಲಿಮರೇತರರು ಎಂಬ ಉಲ್ಲೇಖೀಸಲಾಗಿದ್ದ ಅಂಶಗಳೂ ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ಬಂಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next