ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ದಳ ದೊಡ್ಡ ಕ್ರಮ ಕೈಗೊಂಡಿದೆ. ಅದರಂತೆ ಗುರುವಾರ ಮುಂಜಾನೆ ಎನ್‌ಐಎ ತಂಡ ಕೊಯಮತ್ತೂರಿನ 21 ಸ್ಥಳಗಳು ಸೇರಿದಂತೆ ತಮಿಳುನಾಡಿನ 45 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಅಕ್ಬೋಬರ್ 23 ರ ಭಾನುವಾರ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್ ಪಿಜಿ ಸಿಲಿಂಡರ್ ಅಳವಡಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಜಮೀಶಾ ಮುಬಿನ್ ಮನೆಯಿಂದ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಗುರುವಾರ ಮುಂಜಾನೆ ಕೊಯಮತ್ತೂರು ಸೇರಿ ತಮಿಳುನಾಡಿನ ಕೆಲವೊಂದು ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ: ಬಗೆಹರಿಯದ ಗೊಂದಲ, ಮತ್ತೆ ಮರಳು ಅಭಾವ