Advertisement

ಕಾಫಿ ಬೆಳೆಗಾರನ ಬದುಕು ಕಸಿದ ಮಳೆ

03:30 PM Oct 22, 2020 | Suhan S |

ಬೇಲೂರು: ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಪ್ರದೇಶವನ್ನು ಹೊಂದಿರುವ ತಾಲೂಕಿನಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಶೇ.60ರಷ್ಟು ಬೆಳೆ ಹಾನಿ ಆಗಿದೆ.

Advertisement

ಇದರಿಂದ ಉತ್ತಮ ಇಳುವರಿ, ಲಾಭದ ‌ ನಿರೀಕ್ಷೆಯಲ್ಲಿದ್ದ ರೈತರು, ಅದರಲ್ಲೂ ಕಾಫಿ, ಮೆಣಸು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಬಯಲುಸೀಮೆ, ಅರೆಮಲೆನಾಡು ಭಾಗದ ರೈತ‌ರು ಮುಸುಕಿನ ಜೋಳ, ರಾಗಿ, ಭತ್ತ, ಆಲೂಗಡ್ಡೆ ಬಿತ್ತನೆ ಮಾಡಿದರೆ, ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಕೆ, ಭತ್ತದ ‌ ನಾಟಿಮಾಡಿದ್ದಾರೆ. ಆದರೆ, ಮೂರು ನಾಲ್ಕು ತಿಂಗ‌ಳಿನಿಂದಲೂ ಸ‌ತತವಾಗಿ ಮಳೆ ‌ಸುರಿಯುತ್ತಿರುವ ಕಾರಣ, ಕೈಗೆ ಬಂದಿರುವ ಫ‌ಸಲು ಕೊಯ್ಲು ಮಾಡಲಾಗದೆ ಜಮೀನಿನಲ್ಲೇ ಕೊಳೆಯುತ್ತಿದೆ.

ಬಿಡುವು ನೀಡದ ಮಳೆ: ತಾಲೂಕಿನಲ್ಲಿ ಸಾಮಾನ್ಯವಾಗಿ ಮುಂಗಾರಿನಲ್ಲಿ ಹೆಚ್ಚು ಮಳೆ ಸುರಿದರೆ, ಹಿಂಗಾರಿನಲ್ಲಿ ಇಳಿಮುಖವಾಗುತ್ತ ದೆ. ಹೀಗಾಗಿ ರೈತರು ಜೂನ್‌, ಜುಲೈನಲ್ಲಿ ಬಿತ್ತನೆ ಮಾಡಿ, ಸೆಪ್ಟೆಂಬರ್, ಅಕ್ಟೋಬರ್‌ ನಲಿ ಬೆಳೆ ಕೂಯ್ಲು ಮಾಡುತ್ತಾರೆ. ಆದರೆ, ಈ ಬಾರಿ ಅಕ್ಟೋಬರ್‌ ಮುಗಿಯುತ್ತಾ ಬಂದರೂ ಮಳೆ ಬಿಡುವು ನೀಡುವ ‌ ಲಕ್ಷಣ ಕಾಣುತ್ತಿಲ್ಲ, ಮೋಡ ಮುಸುಕಿನ ‌ ವಾತಾವರಣ, ಆಗಾಗ ತುಂತುರು ಸಹಿತ ಜೋರು ಮಳೆ ಸುರಿಯುತ್ತಿರುವ ಕಾರಣ,ಬೆಳೆ ಕೊಯ್ಲು ಮಾಡುವುದಿರಲಿ, ಜಮೀನಿಗೇ ಕಾಲಿಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳೆಯುತ್ತಿ ಬಳ್ಳಿ: ಮಳೆ ಹೆಚ್ಚಾಗಿ, ಈಗಾಗಲೇ ಹಣ್ಣಾಗಿರುವ ಕಾಫಿ, ಮೆಣಸು ನೆಲಕಚ್ಚಿದೆ. ಜೊತೆಗೆ ಇಡೀ ಗಿಡ ‌ ಮತ್ತು ಬಳ್ಳಿ ಸೊರಗು ರೋಗಕ್ಕೆ ತುತ್ತಾಗುತ್ತಿದೆ. ಕಾಫಿ ತೋಟದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ, ಮೆಣಸಿನ ಬಳ್ಳಿ ನಿಧಾನವಾಗಿ ಹ‌ಳದಿ ಬಣ್ಣಕ್ಕೆ ತಿರುಗಿ, ನಂತರ ‌ ನಿಧಾನವಾಗಿ ಕೊಳೆಯಲಾರಂಭಿಸುತ್ತಿದೆ. ಇದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಇಳುವರಿ ಕುಂಟಿತ ‌, ರೋಗ ಬಾಧೆ, ಕಾರ್ಮಿಕರ ಸಮಸ್ಯೆ, ಬ್ಯಾಂಕ್‌ ಸಾಲ ಹೀಗೆ ಹತ್ತು ಹಲವು ಸ‌ಮಸ್ಯೆಗಳಿಗೆ ತುತ್ತಾಗಿರುವ ಕಾಫಿ, ಮೆಣಸು, ಮುಸುಕಿನ ಜೋಳದ ಬೆಳೆಗಾರರು,ಕೋವಿಡ ಸಂದರ್ಭದಲ್ಲಿ ವ್ಯಾಪಾರ ‌ ವಹಿವಾಟು, ಸೂಕ್ತ ¸ ಬೆಳೇ ಇಲ್ಲದೆ, ಆರ್ಥಿಕ ‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರ ‌ಬೇಕಿದೆ.

ನವೆಂಬರ್‌ನಿಂದ ಕೊಯ್ಲು ಆರಂಭ : ಮಲೆನಾಡುಭಾಗದಲ್ಲಿ ಕಾಫಿ, ಮೆಣಸು,ಭತ್ತದ ಬೆಳೆಗಾರರು ಮಳೆಯ ಹೊಡೆತಕ್ಕೆ ತತ್ತರಿಸಿದ್ದಾರೆ. ಸತತ ಮಳೆಯಿಂದಾಗಿಈ ಬಾರಿ ತಿಂಗಳು ಮುಂಚೆಯೇ ಕಾಫಿ, ಮೆಣಸು ಕೊಯ್ಲಿಗೆಬಂದಿದ್ದು, ರೈತರು ಮಳೆಬಿಡುವುದನ್ನೇ ಕಾಯುತ್ತಿದ್ದಾರೆ.ಬಹುತೇಕ ರೈತರು ನವೆಂಬರ್‌ನಿಂದಕೊಯ್ಲು ಮಾಡಲು ಸಿದ್ಧತೆ ನಡೆಸಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚುಮಳೆ ಆಗಿದೆ. ಹೀಗಾಗಿ ತಾಲೂಕಿನಅರೇಹಳ್ಳಿ, ಬಿಕ್ಕೋಡು,ಕಸಬಾ ಹೋಬಳಿಗಳಲ್ಲಿ ತೀವ್ರ ಬೆಳೆಹಾನಿಯಾಗಿದೆಕಾಳು ಮೆಣಸು 250 ಹೆಕ್ಟೇರ್‌ನಲ್ಲಿ ನಾಶವಾಗಿದೆ. ಈಗಾಗಲೇ ಪರಿಶೀಲಿಸಿ, ಹೆಕ್ಟೇರ್‌ಗೆ 18 ಸಾವಿರ ರೂ.ನಂತೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಲಾಗಿದೆ.– ಮಂಜುನಾಥ್‌, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಈ ಬಾರಿ ಅಕ್ಟೋಬರ್‌ ಮುಗಿಯುತ್ತ ಬಂದರೂ ಮಳೆ ನಿಲ್ಲುವಲಕ್ಷಣಕಾಣುತ್ತಿಲ್ಲ.ಹೀಗಾಗಿ ಕಾಫಿಜೊತೆ ಮೆಣಸು ತುಂಬ ಹಾಳಾಗಿದೆ. ಮರಕ್ಕೆಅಂಟಿಕೊಂಡಿರುವ ಮೆಣಸಿನಬಳ್ಳಿ ಗಾಳಿಮಳೆಯಿಂದಾಗಿ ಕೆಳಗೆಬಿದ್ದಿದೆ. ಶೀತ ಹೆಚ್ಚಾಗಿ ಎಲೆಗಳೆಲ್ಲಹಳದಿಬಣ್ಣಕ್ಕೆ ತಿರುಗುತ್ತಿವೆ.ಕೂಡಲೇ ಸರ್ಕಾರಕಾಫಿಮತ್ತು ಮೆಣಸು ಬೆಳೆಗಾರರಹಿತಕಾಪಾಡಲು ಮುಂದಾಗಬೇಕು. ಚೇತನ್‌ಕುಮಾರ್‌, ಮೆಣಸು ಬೆಳೆಗಾರ, ಕುಶಾವಾರ ಗ್ರಾಮ.

ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಇದೆ. ಅರೇಬಿಕಾ 22 ಸಾವಿರ, ರೋಬಸ್ಟಾ 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿಕಾಫಿ ಪ್ಲಾಂಟೇಷನ್‌ ಇದೆ.ಆದರೆ, ಈ ವರ್ಷ ಬಿದ್ದ ಮಳೆಯಿಂದಕಾಫಿ ಶೇ.60, ಮೆಣಸು ಶೇ.40 ನಷ್ಟ ಉಂಟಾಗಿದೆ. ಸರ್ಕಾರಕೂಡಲೇ ಬೆಳೆಗಾರರ ಹಿತಕಾಪಾಡಲು ಮುಂದಾಗಬೇಕು,ಬೆಳೆಗಾರರು ಪಡೆದಿರುವ ಸಾಲದ ಬಡ್ಡಿ ಸಂಪೂರ್ಣ ಮನ್ನಾಮಾಡಿ, ಬೆಳೆ ನಷ್ಟ ಪರಿಹಾರ ನೀಡಬೇಕು. ಗೋವಿಂದಶೆಟ್ಟಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ, ಬೇಲೂರು ತಾಲೂಕು

ಜಿಲ್ಲೆಯ ಆಲೂರು, ಸಕಲೇಶಪುರ ಮತ್ತು ಬೇಲೂರು ತಾಲೂಕುಗಳಲ್ಲಿಕಾಫಿ, ಏಲಕ್ಕಿ, ಮೆಣಸು, ಭತ್ತ, ಶುಂಠಿ ಇನ್ನಿತರೆ ಸಂಬಾರು ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಈ ವರ್ಷ ಮಳೆ ಹೆಚ್ಚಾಗಿ, ಮರಗಳು ಧರಾಶಾಹಿ ಆಗಿರುವಕಾರಣ ಕಾಫಿ ಗಿಡ ನಾಶವಾಗಿವೆ. ಹೊಸದಾಗಿ ನೆಡುವುದು ಬಹಳಕಷ್ಟ. ಸಾಕಷ್ಟು ವೆಚ್ಚವಾಗಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಕಾಫಿ ಬೆಳೆಗಾರರ ಹಿತಕಾಪಾಡಲು ಮುಂದಾಗಬೇಕು. ತೊ.ಚ.ಅನಂತಸುಬ್ಟಾರಾಯ, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ

 

ಡಿ.ಬಿ.ಮೋಹನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next