Advertisement

ಕೊಡೆ ಮುರುಗನ ಮೇಕಿಂಗ್‌ ವಿಡಿಯೋ ಸಂಭ್ರಮ

09:53 AM Jan 08, 2020 | Suhan S |

“ಕೊಡೆಮುರುಗ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ಟ್ರೇಲರ್‌ ಮೂಲಕ ಮೆಚ್ಚುಗೆ ಪಡೆದು ಗಾಂಧಿನಗರ ಒಂದು ಕಣ್ಣಿಟ್ಟಿರುವಂತೆ ಮಾಡಿರುವ ಸಿನಿಮಾ. ಈಗ ಈ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಚಿತ್ರದ ಮೇಕಿಂಗ್‌ ವಿಡಿಯೋ. ಹೌದು “ಕೊಡೆ ಮುರುಗ’ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಈ ಚಿತ್ರದ ಮೇಕಿಂಗ್‌ ವಿಡಿಯೋ ಇಂದು (ಮಂಗಳವಾರ)ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.

Advertisement

ಗಾಂಧಿನಗರದ ರೆಗ್ಯುಲರ್‌ ಕಾನ್ಸೆಪ್ಟ್ ಅನ್ನು ಬಿಟ್ಟು ಈ ಸಿನಿಮಾ ಮಾಡಲಾಗಿದ್ದು, ಪಾತ್ರದಲ್ಲಿ ಮುನಿಕೃಷ್ಣ ಹಾಗೂ ಸುಬ್ರಮಣ್ಯ ಪ್ರಸಾದ್‌ ಇದ್ದಾರೆ. ನಾಯಕಿಯಾಗಿ ಪಲ್ಲವಿಗೌಡ ಬಣ್ಣ ಹಚ್ಚಿದ್ದಾರೆ. ಈ ಹಿಂದೆ “ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಟನಾಗಿ ಅಬ್ಬರಿಸಿದ್ದ ಮುನಿಕೃಷ್ಣ ಈ ಚಿತ್ರದಲ್ಲಿ ಕೊಡೆ ಮುರುಗನಾಗಿ ನಟಿಸಿದ್ದಾರೆ. ಸುಬ್ರಮಣ್ಯ ಪ್ರಸಾದ್‌ ಈ ಚಿತ್ರದ ನಿರ್ದೇಶಕರು.

ಮೊದಲ ಹಂತವಾಗಿ ಚಿತ್ರದ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಈ ಚಿತ್ರವನ್ನು ಕೆ.ರವಿಕುಮಾರ್‌ ಅವರೊಟ್ಟಿಗೆ ಅಶೋಕ್‌ ಶಿರಾಲಿ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ ಗುರುದತ್‌, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್‌ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next