ಮುಂಬಯಿ: ಸಾವು ಯಾವ ಮುನ್ಸೂಚನೆ ಇಲ್ಲದೆ ಬರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎನ್ನಬಹುದು. ತೆಂಗಿನ ಮರ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆಂಬೂರ್‌ನಲ್ಲಿ ನಡೆದಿದೆ.
Advertisement
ಚೆಂಬೂರ್‌ನ ಶುಶ್ರೂತ್ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೂರದರ್ಶನದ ಮಾಜಿ ನಿರೂಪಕಿ ಕಾಂಚನಾ ರಜತ್‌ನಾಥ್ ಅವರ ಮೇಲೆ ದೊಪ್ಪನೆ ತೆಂಗಿನಮರ ಬಿದ್ದಿದೆ. ಆಕೆ ಅಲ್ಲಿಯೆ ಕುಸಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಹತ್ತಾರು ಜನರು ಮರವನ್ನು ಎತ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಂತಾಜನಕರ ಸ್ಥಿತಿಯಲ್ಲಿದ್ದ ಅವರು ಶನಿವಾರ 5.30 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.