Advertisement
ಕರಾವಳಿಯಲ್ಲಿ ಈ ವರ್ಷ ತೆಂಗಿನ ಕಾಯಿಯ ದರ ನಿರೀಕ್ಷೆಗೂ ಮೀರಿ ಕುಸಿದಿದೆ. ಸಿಪ್ಪೆ ಸಹಿತ ತೆಂಗಿನ ಕಾಯಿಯನ್ನು 8 ರೂ., 9 ರೂ.ಗಳಿಗೆ ಮತ್ತು ಸಿಪ್ಪೆ ತೆಗೆದ ತೆಂಗಿನ ಕಾಯಿಯನ್ನು ಕೆಜಿಗೆ 24 ರೂ.ಗಳಿಂದ 26 ರೂ.ಗಳಿಗೆ ಕೃಷಿಕರು ಸಗಟು ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ. ಸಗಟು ವ್ಯಾಪಾರಸ್ಥರಿಂದ ಅಂಗಡಿಯವರು ಖರೀದಿಸಿ ಕೆಜಿಗೆ 35 ರೂ.ಗಳಿಂದ 40 ರೂ.ಗಳಿಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ತೆಂಗಿನ ಕೊಬ್ಬರಿ ಕೆ.ಜಿ. ಸರಾಸರಿ 120 ರೂ.ಗಳಿಂದ 130 ರೂ.ಗಳವರೆಗೂ ಇರುತಿತ್ತು. ಈಗ ಅದು ಕೂಡ ಕಡಿಮೆಯಾಗಿದೆ. ಸುಪೀರಿಯರ್ ಗುಣಮಟ್ಟದ ಕೊಬ್ಬರಿಯ ಕೆಜಿಗೆ 80 ರೂ.ಗಳಿಂದ 85 ರೂ. ಹಾಗೂ ಸಾಮಾನ್ಯ ಕೊಬ್ಬರಿಗೆ ಕೆಜಿಗೆ 70 ರೂ.ಗಳಿಂದ 80 ರೂ.ಗೆ ಇಳಿದಿದೆ. ಬೆಂಬಲ ಬೆಲೆಯೂ ಇಲ್ಲ
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಗೆ ಯಾವ ಬೆಲೆ ನಿಗದಿ ಮಾಡಲಾಗುತ್ತದೆಯೋ ಅದರಂತೆ ಖರೀದಿ ನಡೆಯುತ್ತಿದೆ. ತೆಂಗಿಗೆ ಬೆಂಬಲ ಬೆಲೆ ಇಲ್ಲ. ಕೊಬ್ಬರಿಯ ಬೆಲೆ ತೀರ ಕುಸಿತ (ಸುಮಾರು 25 ರೂ.ಗಳಿಗೆ) ಕಂಡಾಗ ಮಾತ್ರ ಬೆಂಬಲ ಬೆಲೆಯಡಿ ಖರೀದಿಗೆ ಅವಕಾಶವಿದೆ. ಉಳಿದ ಸಮಯದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Related Articles
ಸ್ಥಳೀಯವಾಗಿ ಅನೇಕ ಕಡೆಗಳಲ್ಲಿ ತೆಂಗಿನ ಎಣ್ಣೆ ಮಾಡಿಕೊಡಲಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸದೆ ಗಾಣಗಳ ಮೂಲಕ ಎಣ್ಣೆ ತೆಗೆಯುವ ವ್ಯವಸ್ಥೆಯೂ ಇದೆ. ಶುದ್ಧ ತೆಂಗಿನ ಎಣ್ಣೆಗೆ 300ರೂ.ಗಳಿಂದ 325 ರೂ.ಗಳ ವರೆಗೂ ದರವಿದೆ.
Advertisement
ಅನಂತರ ಗುಣಮಟ್ಟದ ಎಣ್ಣೆಗೆ 250 ರೂ.ಗಳಿಂದ 285 ರೂ. ಇದೆ. ತೆಂಗಿನ ಕಾಯಿ ದರ ನೆಲಕಚ್ಚಿದರೂ ತೆಂಗಿನ ಎಣ್ಣೆ ದರ ಮಾತ್ರ ಮೇಲೇರುತ್ತಲೇ ಇದೆ.
ಸಂಕಷ್ಟದಲ್ಲಿ ಬೆಳೆಗಾರರುತೆಂಗು ಬೆಳೆಗಾರರಿಗೆ ಈ ಬಾರಿ ಸಾಕಷ್ಟು ನಷ್ಟವಾಗಿದೆ. ದಿನೇದಿನೆ ದರ ಕುಸಿಯುತ್ತಲೇ ಇದೆ. ನಿರ್ದಿಷ್ಟಬೆಂಬಲ ಬೆಲೆ ಘೋಷಿಸುವಂತೆ ಸ್ಥಳೀಯ ಜನ ಪ್ರತಿನಿಧಿಗಳ ಮೂಲಕ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸರಕಾರ ತೆಂಗು ಬೆಳೆಗಾರರ ಕಷ್ಟಕ್ಕೂ ಸ್ಪಂದಿಸಬೇಕು ಎಂದು ಕರಾವಳಿಯ ತೆಂಗು ಬೆಳೆಗಾರರು ಆಗ್ರಹಿಸಿದ್ದಾರೆ.