Advertisement

ಹೊಟ್ಟೆಯ ಆರೋಗ್ಯಕ್ಕೆ ತೆಂಗಿನೆಣ್ಣೆ

09:55 PM Aug 26, 2019 | mahesh |

ತೆಂಗಿನೆಣ್ಣೆ ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದರ ಪ್ರಯೋಜನಗಳು ಹಲವಾರು. ಇದನ್ನು ಆರೋಗ್ಯಕ್ಕಾಗಿ, ಕೂದಲಿನ ಸೌಂದರ್ಯಕ್ಕಾಗಿ ಮತ್ತು ಮುಖದ ಸೌಂದರ್ಯಕ್ಕಾಗಿ ಬಳಸುತ್ತಾರೆ. ತೆಂಗಿನೆಣ್ಣೆಯಲ್ಲಿ ಅತಿ ಹೆಚ್ಚು ಕ್ಯಾಲರಿಗಳಿವೆ. ತೆಂಗಿನೆಣ್ಣೆ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ.

Advertisement

ತೆಂಗಿನೆಣ್ಣೆ ಬಳಸಿ ಹೊಟ್ಟೆ ಕ್ಲೀನ್‌ ಮಾಡಬಹುದು. ಆಹಾರ ತಯಾರಿಕೆಯಲ್ಲಿ ಬೇರೆ ಎಣ್ಣೆಗಳನ್ನು ಬಳಸುವ ಬದಲು ತೆಂಗಿನೆಣ್ಣೆಯನ್ನು ಬಳಸಲಾರಂಭಿಸಿದರೆ ಹೊಟ್ಟೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ದಿನವನ್ನು 2 ಟೇಬಲ್‌ ಸ್ಪೂನ್‌ ತೆಂಗಿನೆಣ್ಣೆಯಿಂದ ಆರಂಭಿಸಿ. ಪ್ರತಿದಿನ ಒಂದರಿಂದ 2 ಟೇಬಲ್‌ಸ್ಪೂನ್‌ ಸೇವಿಸಲಾರಂಭಿಸಿ. ದಿನದಲ್ಲಿ ಒಟ್ಟು 14 ಟೇಬಲ್‌ಸ್ಪೂನ್‌ ತೆಂಗಿನೆಣ್ಣೆಯನ್ನು ಸೇವಿಸಬೇಕು.

ಒಂದು ವೇಳೆ ಖಾಲಿ ತೆಂಗಿನೆಣ್ಣೆಯನ್ನು ಸೇವಿಸಲು ಸಾಧ್ಯವಾಗಿಲ್ಲ ಎಂದಾದರೆ ಬೆಚ್ಚಗಿನ ನಿಂಬೆ ನೀರು ಅಥವಾ ನೈಸರ್ಗಿಕ ಯೋಗರ್ಟನೊಂದಿಗೆ ಮಿಶ್ರ ಮಾಡಿ ಸೇವಿಸಬಹುದು. ಆರಂಭದಲ್ಲಿ ಅರ್ಧದಿಂದ ಒಂದು ಟೇಬಲ್‌ ಸ್ಪೂನ್‌ ತೆಂಗಿನೆಣ್ಣೆಯನ್ನು ದಿನದಲ್ಲಿ ಮೂರು ಬಾರಿ ತೆಗೆದುಕೊಳ್ಳಲಾರಂಭಿಸಿ. ದಿನಕಳೆದಂತೆ ಅದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ. ಹೀಗೆ ತೆಂಗಿನೆಣ್ಣೆಯ ಸೇವನೆ ಹೊಟ್ಟೆಯ ಉತ್ತಮವಾಗಿರಿಸಿಕೊಳ್ಳಲು ಸಹಕಾರಿ.

1 ಜೀರ್ಣಕ್ರಿಯೆಗೆ ಸಹಾಯಕ
ಆಹಾರ ಸೇವನೆಗೂ ಮೊದಲು ತೆಂಗಿನೆಣ್ಣೆಯ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ಹೋಗಿ ಅನಂತರ ತಿಂದ ಆಹಾರ ಚೆನ್ನಾಗಿ ಜೀರ್ಣಗೊಳ್ಳುತ್ತದೆ.

2 ರೋಗಗಳಿಗೆ ತಡೆ
ಹೊರಗಿನ ಪರಿಸರದಲ್ಲಿರುವ ಧೂಳು, ವಿಷಯುಕ್ತ ಗಾಳಿ ಸೇವನೆಯಿಂದಾಗಿ ಹೊಟ್ಟೆಯಲ್ಲಿ ಉಂಟಾಗುವ ರೋಗಗಳನ್ನು ತೆಂಗಿನೆಣ್ಣೆ ತಡೆಗಟ್ಟುತ್ತದೆ.

Advertisement

3 ಶಿಲೀಂಧ್ರ ಸೋಂಕು
ಹೊಟ್ಟೆಯಲ್ಲಾಗುವ ಶಿಲೀಂಧ್ರ ಸೋಂಕು ಅನ್ನು ತೆಂಗಿನೆಣ್ಣೆಯಿಂದ ತಡೆಗಟ್ಟಬಹುದು.

4 ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಗೊಳ್ಳುತ್ತದೆ
ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡುವ ಕೆಲಸವನ್ನು ತೆಂಗಿನೆಣ್ಣೆ ಮಾಡುತ್ತದೆ

5 ಅಲ್ಸಾರ್‌ ಸಮಸ್ಯೆಗೆ

ತೆಂಗಿನೆಣ್ಣೆ ಸೇವನೆಯಿಂದ ಅಲ್ಸಾರ್‌ ಸಮಸ್ಯೆ ನಿವಾರಣೆ ಸಾಧ್ಯ. ಹೊಟ್ಟೆಯನ್ನು ಕ್ಲೀನ್‌ ಮಾಡುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಹೋಗುತ್ತದೆ. ಇದು ಅಲ್ಸಾರ್‌ ಸಮಸ್ಯೆಯನ್ನು ತಡೆಗಟ್ಟುತ್ತದೆ.

-   ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next