Advertisement
ಭಾರತೀಯ ಕೃಷಿ ಸಂಶೋಧನ ಕೌನ್ಸಿಲ್‌ನ ಪುನರ್ ಪರಿಶೋಧನ ಸಮಿತಿ 2018ರ ಅ. 28ರಂದು ದಿಲ್ಲಿಯಲ್ಲಿ ಸಭೆ ನಡೆಸಿ, ಕಿದು ಮತ್ತು ಕೇರಳದ ಸಂಶೋಧನ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಕಾಸರಗೋಡು ಸಿಪಿಸಿಆರ್‌ಐ, ಆಸ್ಸಾಂನ ಕಾಯಕುಚ್ಚಿ, ಪ. ಬಂಗಾಲದ ಮೋಹಿತ್ ನಗರ ಸಂಶೋಧನ ಕೇಂದ್ರಗಳಲ್ಲಿ ಕೃಷಿ ತಂತ್ರಜ್ಞರ ಸಂಖ್ಯೆ ಕಡಿತಗೊಳಿಸಲು ತೀರ್ಮಾನಿಸಿದೆ.
ಕೃಷಿ ತಂತ್ರಜ್ಞರ ಸಂಖ್ಯೆ ಕಡಿತ, ಕಿದು ಕೇಂದ್ರ ಮುಚ್ಚುವುದು, ಆಂಧ್ರದಲ್ಲಿ ನೂತನ ಕೇಂದ್ರ ಆರಂಭಿಸಲು ಪರವಾನಿಗೆ ಪಡೆಯುವಂತೆ ಸಿದ್ಧವಾದ ಸಭೆಯ ವರದಿಯ ಪ್ರತಿ ಕೇಂದ್ರ ಕೃಷಿ ಸಚಿವಾಲಯ ತಲುಪಿದ್ದು, ಕೃಷಿ ಸಚಿವರ ಒಪ್ಪಿಗೆ ಸಿಗಲಷ್ಟೆ ಬಾಕಿ ಇದೆ. ನ. 29ರಂದು ಸಮಿತಿಯ ಮತ್ತೂಂದು ಸಭೆ ನಡೆಯಲಿದೆ. ಕೇಂದ್ರ ಕೃಷಿ ಮತ್ತು ರೈತ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ (ಐಸಿಎಆರ್)ಯ ಅಧೀನದಲ್ಲಿ ಸುಮಾರು 120 ಅಂಗಸಂಸ್ಥೆಗಳಿವೆ. ಇವುಗಳಲ್ಲೊಂದು ಸಿಪಿಸಿಆರ್‌ಐ ಕಾಸರಗೋಡು ಕೇಂದ್ರ ಕಚೇರಿ. ಕಿದು, ಕಾಯಂಕುಳ ಕೇಂದ್ರಗಳು ಇದರಡಿ ಬರುತ್ತವೆ.
Related Articles
ಪುನರ್ ಪರಿಶೋಧನ ಸಮಿತಿಯ ಸದಸ್ಯರೆಲ್ಲ ಉತ್ತರ ಭಾರತದವರು. ಹೀಗಾಗಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಯ ಸಂಸದರು, ರಾಜ್ಯ ಸರಕಾರ ಎಚ್ಚೆತ್ತು ಕೇಂದ್ರ ಕೈತಪ್ಪದಂತೆ ಎಚ್ಚರ ವಹಿಸಬೇಕಿದೆ.
Advertisement
ಪರ್ಯಾಯ ದಾರಿಯಲ್ಲಿ ಪ್ರಯತ್ನಸಿಪಿಸಿಆರ್ಐ ಕಿದು ಸಂಸ್ಥೆಯು ಅರಣ್ಯ ಇಲಾಖೆಯೊಂದಿಗೆ ಹೊಂದಿರುವ ಗುತ್ತಿಗೆ ನವೀಕರಣದ ವಿಚಾರ ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಬಾಕಿ ಇರುವಾಗಲೇ ಉನ್ನತ ಮಟ್ಟದ ಅಧಿಕಾರಿಗಳ ನಿಷ್ಕಾಳಜಿಯಿಂದ ಆಂಧ್ರದ ಸಾಮಲ್ನೋಟ ಎಂಬಲ್ಲಿ ಹೊಸದಾಗಿ ಕೇಂದ್ರ ಸ್ಥಾಪಿಸಲು ನಡೆದಿರುವ ಷಡ್ಯಂತ್ರದ ಭಾಗ ಇದಾಗಿದೆ. ಡಾ| ಹೆಗ್ಗಡೆ ಸಂಕಲ್ಪ
ಕಾನೂನಿನ ಅಡಚಣೆ ನಿವಾರಿಸಿ ಕೇಂದ್ರವನ್ನು ಇಲ್ಲೇ ಉಳಿಸುವಂತೆ ಇತ್ತೀಚೆಗೆ ಕಿದುವಿನಲ್ಲಿ ನಡೆದ ಕೃಷಿಮೇಳದಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರು ರೈತರಿಂದ ಸಂಕಲ್ಪ ಮಾಡಿಸಿದ್ದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಬಳಿಯೂ ಮನವಿ ಮಾಡಿದ್ದರು. ಡಿವಿಎಸ್ ಪೂರಕ ಭರವಸೆ ನೀಡಿದ್ದರು. ಉದಯವಾಣಿ ವರದಿ ಬಹಿರಂಗ
ಕಿದುವಿನ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆದು ತೆಂಗು ಜೀನ್ ಬ್ಯಾಂಕ್ ಸ್ಥಾಪಿಸಲಾಗಿತ್ತು. ಲೀಸ್ ನವೀಕರಿಸದೆ ಕೇಂದ್ರವನ್ನು ಆಂಧ್ರಕ್ಕೆ ಸ್ಥಳಾಂತರಿಸಲು ಹುನ್ನಾರ ರೂಪಿಸಿದ ಕುರಿತು ಈ ಹಿಂದೆ “ಉದಯವಾಣಿ’ ವರದಿ ಮಾಡಿತ್ತು. ಗಮನಕ್ಕೆ ಬಂದಿಲ್ಲ
ಉನ್ನತ ಮಟ್ಟದ ಸಮಿತಿ ಸಭೆಗಳಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಇದೂ ಚರ್ಚೆಗೆ ಬಂದಿರಬಹುದು. ಅಲ್ಲಿ ಚರ್ಚೆ ನಡೆದಿದ್ದೆಲ್ಲವೂ ಅಂತಿಮವಲ್ಲ. ಇಂತಹ ಸುದ್ದಿಗಳು ಅಗಾಗ್ಗೆ ಬರುತ್ತಿರುತ್ತವೆ. ಇದು ನಂಬಲರ್ಹವಲ್ಲ. ಗಾಳಿ ಸುದ್ದಿ ಎಂದು ಭಾವಿಸಿದ್ದೇನೆ.
ಡಾ| ಪಿ. ಚೌಡಪ್ಪ, ನಿರ್ದೇಶಕರು, ಸಿಪಿಸಿಆರ್‌ಐ, ಕಾಸರಗೋಡು