Advertisement

ತೆಂಗಿನಕಾಯಿ ಚಿಪ್ಪೇ ಮಾಸ್ಕ್ ಆಯ್ತು!

01:19 AM Sep 10, 2021 | Team Udayavani |

ಇಂಡೋನೇಷ್ಯಾ: ಮನುಷ್ಯನೊಳಗೆ ಸೃಷ್ಟಿಶೀಲತೆಯೆನ್ನುವುದು ಸ್ವಾಭಾವಿಕ ಗುಣ. ತನಗೆ ಗೊತ್ತಿಲ್ಲದೇ ವ್ಯಕ್ತಿಗಳು ಹೊಸತೇನನ್ನೋ ಹುಡುಕುತ್ತಾರೆ. ಇದೇ ಹೊಸಹೊಸ ಅನ್ವೇಷಣೆಗೆ ಕಾರಣ.

Advertisement

ಇಂಡೋನೇಷ್ಯಾದ ಬಾಲಿ ಪ್ರದೇಶದ ದೆನ್ಪಸರ್‌ ಎಂಬ ಊರಿನಲ್ಲಿ ತಮಾಷೆಯೆನಿಸುವ ಆದರೆ ಅಷ್ಟೇ ಕ್ರಿಯಾತ್ಮಕ ಶೋಧನೆಯೊಂದು ಪತ್ತೆಯಾಗಿದೆ. ಇದನ್ನು ಮಾಡಿದ್ದು ನೆಂಗಾ ಬುಧಿಯಸ (44) ಎಂಬ ಕಾರು ನಿಲ್ದಾಣ ಸಿಬಂದಿ!  ಬುಧಿಯಸ ತೆಂಗಿನಕಾಯಿ ಚಿಪ್ಪನ್ನೇ ಮಾಸ್ಕ್ ರೀತಿಯಲ್ಲಿ ಬದಲಾಯಿಸಿದ್ದಾರೆ. ಈ ಚಿಪ್ಪಿನ ಮುಂಭಾಗದಲ್ಲೊಂದು ರಂಧ್ರ ಕೊರೆದು ಅದಕೆ ಸೀಟಿಯನ್ನು ಅಳವಡಿಸಿಕೊಂಡಿದ್ದಾರೆ.

“ತಮ್ಮ ಕೆಲಸಕ್ಕೆ ಸೀಟಿ ಊದುವುದು ಅನಿವಾರ್ಯ, ಮಾಸ್ಕ್ ಧರಿಸುವುದೂ ಅನಿವಾರ್ಯ. ಪದೇ ಪದೆ ಮಾಸ್ಕ್ ತೆಗೆದು, ಸೀಟಿ ಊದಲಿಕ್ಕಾಗುವುದಿಲ್ಲವೆಂದು ತೆಂಗಿನಕಾಯಿ ಚಿಪ್ಪನ್ನೇ ಮಾಸ್ಕ್ ರೀತಿಯಲ್ಲಿ ಬದಲಿಸಿ ಅದಕ್ಕೆ ಸೀಟಿ ಅಳವಡಿಸಿಕೊಂಡೆ’ ಎಂದು ಮುಗ್ಧವಾಗಿ ನೆಂಗಾ ಹೇಳಿದ್ದಾರೆ. ಪೊಲೀಸರು ಮಾತ್ರ ಇದನ್ನು ಒಪ್ಪಿಲ್ಲ, ಅವರಿಗೆ ದಂಡ ಹೊಡೆಯುವ ಶಿಕ್ಷೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next