Advertisement

ನದಿ ನೀರು ಬಳಕೆಗೆ ಕೋಲ ಕಂಪೆ‌ನಿಗಳಿಗೆ ಹೈ ಅನುಮತಿ

10:51 AM Mar 03, 2017 | Harsha Rao |

ತಿರುನಲ್ವೇಲಿ: ತಂಪು ಪಾನೀಯ ಕಂಪನಿಗಳಾದ ಪೆಪ್ಸಿ ಮತ್ತು ಕೋಕಕೋಲಗಳಿಗೆ ತಮೀರಾಬರಣಿ ನದಿಯಿಂದ ನೀರು ಪಡೆಯಲು ಮದ್ರಾಸ್‌ ಹೈಕೋರ್ಟ್‌  ಗುರುವಾರ ಅನುಮತಿ ನೀಡಿದೆ. ಇದನ್ನು ವಿರೋಧಿಸಿ ಹಲವಾರು ಜನರು ಮಂಡಿವರೆಗೂ ಇದ್ದ ನದಿ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಪೆಪ್ಸಿ ಕೋಲದಂಥ ಬಹುರಾಷ್ಟ್ರೀಯ ಕಂಪನಿಗಳಿಗೆ ತಂಪು ಪಾನೀಯಗಳಿಗಷ್ಟೇ ಅಲ್ಲದೆ ಕುಡಿಯುವ ನೀರಿನ ಬಾಟಲಿ ತಯಾರಿಕೆಗೂ ನೀರು ಪಡೆದುಕೊಳ್ಳಲು ಕೋರ್ಟ್‌ ಅನುಮತಿ ನೀಡಿದೆ. ರೈತರು ವ್ಯವಸಾಯಕ್ಕಾಗಿ ನೀರಿನ ಕೊರತೆ ಅನುಭವಿಸುತ್ತಿರುವ ವೇಳೆ ತಂಪು ಪಾನೀಯ ಕಂಪನಿಗಳು ನೀರು ಬಳಸಿಕೊಳ್ಳದಂತೆ ಸರಕಾರ ತಡೆದಿಲ್ಲ ಎಂದು ಸರಕಾರದ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ಪೆಪ್ಸಿ ಕೋಲ ಪಾನೀಯಗಳ ಮೇಲೆ ನಿಷೇಧ ಹೇರಿರುವ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next