ಅಮೇಠಿ(ಉತ್ತರಪ್ರದೇಶ): ಪಾರ್ಕ್ ಮಾಡಿದ್ದ ಬೈಕ್ ಮೇಲೆ ದಿಢೀರನೆ ಕಾಳಿಂಗ ಸರ್ಪ ಹತ್ತಿ ಬಂದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಅಮೇಠಿಯ ರೈಲ್ವೆ ಕ್ರಾಸ್ ಸಮೀಪ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Bangladesh: ನಿಮ್ಮ ಪತ್ನಿಯ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ: ಬಾಂಗ್ಲಾ ಪ್ರಧಾನಿ ಕಿಡಿ
ಬೈಕ್ ನಲ್ಲಿ ಕಾಳಿಂಗ ಸರ್ಪವನ್ನು ಕಂಡು ಹೆದರಿ ಹೌಹಾರಿದ ಸವಾರ, ಕೂಡಲೇ ಬೈಕ್ ನಿಂದ ಹಾರಿದ್ದ. ಅಮೇಠಿ ಜಯಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಸಾದೇಪುರ್ ರೈಲ್ವೆ ಕ್ರಾಸಿಂಗ್ ಸಮೀಪ ಭಾನುವಾರ (ಮಾರ್ಚ್ 31) ಸಂಜೆ ಈ ಘಟನೆ ನಡೆದಿತ್ತು ಎಂದು ವರದಿ ತಿಳಿಸಿದೆ.
ಬೈಖ್ ನ ಹೆಡ್ ಲೈಟ್ ಭಾಗದಿಂದ ಕಾಳಿಂಗ ಸರ್ಪ ಮೇಲೇರಿ ಬಂದು, ಬುಸುಗುಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹಾವನ್ನು ಕಂಡು ದೂರ ಸರಿದು, ಬೈಕ್ ಸವಾರ ವಿಡಿಯೋ ಮಾಡಿರುವುದಾಗಿ ವರದಿ ವಿವರಿಸಿದೆ.
ವಿಷಯ ತಿಳಿದ ಸ್ಥಳೀಯರು ಗುಂಪುಗೂಡತೊಡಗಿದ್ದರು. ನಂತರ ಬೈಕ್ ಮೇಲೆ ಇದ್ದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯದೊಳಕ್ಕೆ ಬಿಡಲಾಯಿತು ಎಂದು ವರದಿ ತಿಳಿಸಿದೆ. ಸಮೀಪದ ಅರಣ್ಯ ಪ್ರದೇಶ ಇರುವ ಅಶ್ವತ್ಥ ಮರದ ಸಮೀಪ ಕಾಳಿಂಗ ಸರ್ಪ ವಾಸವಾಗಿದ್ದು, ಆಗಾಗ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.