Advertisement

ಲಾೖಲ ಸ್ನೇಕ ಅಶೋಕ್‌ಗೆ ನಾಗರ ಹಾವು ಕಡಿತ: ಪ್ರಾಣಾಪಾಯದಿಂದ ಪಾರಾದ ಆಶೋಕ್‌

10:33 PM Mar 26, 2023 | Team Udayavani |

ಬೆಳ್ತಂಗಡಿ: ವಿಷಪೂರಿತ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡುತ್ತಿರುವ ಲಾೖಲದ ಸ್ನೇಕ ಅಶೋಕ್‌ ಅವರಿಗೆ ನಾಗರ ಹಾವು ಹಿಡಿಯುವ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಅದೃಷ್ಟವಶಾತ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ತಿಳಿದುಬಂದಿದೆ. ಧರ್ಮಸ್ಥಳ ಗ್ರಾಮದಲ್ಲಿನ ಮನೆಯೊಂದರಲ್ಲಿ ನಾಗರ ಹಾವು ಇರುವುದಾಗಿ ಸ್ನೇಕ್‌ ಅಶೋಕ್‌ ಅವರಿಗೆ ಮಾಹಿತಿ ಬಂದಿತ್ತು. ಇದರ ರಕ್ಷಣೆಗೆ ತಕ್ಷಣ ಹೊರಟ ಅವರು ನಾಗರ ಹಾವನ್ನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ ಎನ್ನಲಾಗುತ್ತಿದೆ.
ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next