ಕುಂಬಳೆ: ಕುಂಬಳೆ ಬಳಿಯ ಅಂಬಿಲಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ವಾರ್ಷಿಕ ಉತ್ಸವದ ತೃತೀಯ ದಿನವಾದ ಎ.6ರಂದು ಸಂಜೆ ಜಾತ್ರೆ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಗೋಳಿ ಮರದ ಬೃಹತ್‌ಗಾತ್ರದ ರೆಂಬೆ ಮುರಿದು ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೀಯಪದವು ಬಳಿಯ ಮುನ್ನಿಪ್ಪಾಡಿ ಗುತ್ತು ದಿ|ಪದ್ಮನಾಭ ಆಳ್ವ ಅವರ ಪುತ್ರ ಜಯಪ್ರಕಾಶ್ ಆಳ್ವ (42) ಎ.9ರಂದು ಮುಂಜಾನೆ ಸಾವಿಗೀಡಾಗಿದ್ದಾರೆ. ಮೃತರು ಪತ್ನಿ ಪ್ರಮೀಳಾ, ಪುತ್ರಿಯರಾದ 9 ವರ್ಷದ ಪ್ರಕೃತಿ ಮತ್ತು ಒಂದೂವರೆ ವರ್ಷದ ನಿಹಾರಿಕಾ ಅವರನ್ನು ಅಗಲಿದ್ದಾರೆ.
Advertisement
ಜಯಪ್ರಕಾಶ್ ಅವರು ಕೃಷಿಕರಾಗಿದ್ದು, ರಾಜಕೀಯ ಹಾಗೂ ಧಾರ್ಮಿಕ ನಾಯಕರಾಗಿದ್ದರು. ಭಾರತೀಯ ಜನತಾ ಯುವ ಮೋರ್ಚಾ ಮೀಂಜ ಪಂಚಾಯತ್ ಮಾಜಿ ಅಧ್ಯಕ್ಷ, ಬಿ.ಜೆ.ಪಿ. ಮೀಂಜ ಪಂಚಾಯತ್ ಕಾರ್ಯದರ್ಶಿ ಯಾಗಿದ್ದರಲ್ಲದೆ ಸಂಘ ಪರಿವಾರದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. 2015ರಲ್ಲಿ ಮೀಂಜ ವಾರ್ಡಿನಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ಮೃತರ ಮನೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಸೋಮವಾರಪೇಟೆ: ತಾಲೂ ಕಿನ ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿದ ಕೂಗೇಕೋಡಿ ಸಬ್ಬನಕೊಪ್ಪ ಗ್ರಾಮದ ಮಂಜುನಾಥ್ ಅವರ ಪುತ್ರ ಅಭಿಷೇಕ್(22)ನೀರುಪಾಲಾದ ಘಟನೆ ಸೋಮವಾರ ಸಂಭವಿಸಿದೆ.
Related Articles
Advertisement
ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಕುಮಾರಳ್ಳಿ ಗ್ರಾಮದ ಈಜುಗಾರ ಪ್ರಸನ್ನ ಅವರು ನೀರಿನ ಹೊಂಡದಲ್ಲಿ ಶೋಧ ನಡೆಸಿದ್ದು, 20 ಅಡಿ ಆಳದಲ್ಲಿ ಮೃತದೇಹ ಸಿಲು ಕಿರುವ ಬಗ್ಗೆ ಖಚಿತಪಡಿಸಿದ್ದಾರೆ. ರಾತ್ರಿ ಯಾದ ಕಾರಣ ಕಾರ್ಯಾ ಚರಣೆಗೆ ತೊಡಕಾಗಿದ್ದು, ಮಂಗಳವಾರ ಶವ ವನ್ನು ಮೇಲಕ್ಕೆತ್ತಲಾಗುವುದು ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.
ಜಾಹೀರಾತು ನೀಡಿ ಮದುವೆಗೆ ಯತ್ನ: ನಷ್ಟ ಪರಿಹಾರಬದಿಯಡ್ಕ: ಪತ್ರಿಕೆಯಲ್ಲಿ ಜಾಹೀರಾತು ನೀಡಿ ಮದುವೆಗೆ ಯತ್ನಿಸಿದ ಇಬ್ಬರ ಮಕ್ಕಳ ತಂದೆಗೆ 30 ಸಾ. ರೂ. ನಷ್ಟ ಪರಿಹಾರ ನೀಡುವಂತೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆಯಲ್ಲಿ ನಿರ್ಧಾರಕ್ಕೆ ಬರಲಾಯಿತು. ಎರ್ನಾಕುಳಂ ಕಾಕನಾಡ್ ವಡಕೂಟ್ ಹೌಸ್‌ನ ವಿ.ಎನ್.ಸುಭಾಶ್ (52) ಹೆಸರಿನಲ್ಲಿ ಜಾಹೀರಾತನ್ನು ನೀಡಿ ವಂಚಿಸಲು ಪ್ರಯತ್ನಿಸಲಾಗಿತ್ತು. ಬೆಂಗ್ರೆ : ಮೂವರ ಮೇಲೆ ಹಲ್ಲೆ
ಪಣಂಬೂರು: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಐದಾರು ಮಂದಿ ಮುಸುಕುಧಾರಿಗಳ ತಂಡ ವೊಂದು ಮೂವರು ಯುವಕರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬೆಂಗ್ರೆಯಲ್ಲಿ ತಡರಾತ್ರಿ ಸಂಭವಿಸಿದೆ.
ಕಸಬ ಬೆಂಗ್ರೆ ನಿವಾಸಿಗಳಾದ ಅನ್ವೀಝ್(17), ಸಿರಾಜ್(18), ಇಝಾದ್ (19) ಗಾಯಗೊಂಡ ವರು. ಅನ್ವೀಝ್ ಗಂಭೀರ ಗಾಯ ಗೊಂಡಿದ್ದು, ಮತ್ತಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳು ಗಳನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ರವಿವಾರ ರಾತ್ರಿ ಬೆಂಗ್ರೆ ಫುಟ್‌ಬಾಲ್ ಮೈದಾನದ ಬಳಿ ಮೊಬೈಲ್ ವೀಕ್ಷಿಸುತ್ತಿದ್ದಾಗ ಏಕಾಏಕಿ ಮುಸುಕುಧಾರಿಗಳು ಮೂವರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು. ಚಾಕುವಿನಿಂದ ತಿವಿದ ಕಾರಣ ಅನ್ವೀಝ್ ತೀವ್ರ ಗಾಯ ಗೊಂಡು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದರೆ, ಇಜಾದ್ ಹಾಗೂ ಸಿರಾಜ್ ತಪ್ಪಿಸಿಕೊಂಡರು. ಇಜಾದ್ ಅವರು ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಗಾಂಜಾ ಮಾರಾಟ: ಆರೋಪಿಗಳು ಸೆರೆ
ಪುತ್ತೂರು: ನೆಹರೂನಗರ ದ ಕಾಲೇಜು ಆಸುಪಾಸಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಬಕದ ಕಲ್ಲಂದಡ್ಕ ನಿವಾಸಿಗಳಾದ ಮಹಮ್ಮದ್ ತೌಫೀಕ್ ಹಾಗೂ ಉಮ್ಮರ್ ಫಾರೂಕ್ ಬಂಧಿತರು. ಆರೋಪಿಗಳಿಂದ 350 ಗ್ರಾಂ ಗಾಂಜಾ ಹಾಗೂ ಬೈಕನ್ನು ವಶಪಡಿಸಲಾಗಿದೆ. ಎಸ್‌ಐ ಅಜಯ್ ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಹೆಬ್ಟಾವಿನ ರಕ್ಷಣೆ
ಉಪ್ಪಿನಂಗಡಿ: ಸಮೀಪದ ಪುಳಿತ್ತಡಿಯಲ್ಲಿ ವಾಹನದ ಅಡಿಗೆ ಬಿದ್ದು ಗಾಯಗೊಂಡಿದ್ದ ಹೆಬ್ಟಾವನ್ನು ಅರಣ್ಯ ಇಲಾಖೆ ಸಿಬಂದಿ ಸೋಮ ವಾರ ರಕ್ಷಿಸಿದ್ದಾರೆ. ಹೆಬ್ಟಾವನ್ನು ಸ್ಥಳೀಯ ನಿವಾಸಿ ಶಾಂಭವಿ ರೈ ಅವರು ಗಮನಿಸಿ, ಸ್ಥಳೀಯರೊಂ ದಿಗೆ ಸೇರಿ ನೀರು ಹಾಕಿ ಉಪಚರಿಸಿ, ರಸ್ತೆಯ ಬದಿಗೆ ಸರಿಸಿದ್ದರು. ಬಳಿಕ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಯಿತು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದರಾದರೂ ರಸ್ತೆ ಬದಿಯ ಚರಂಡಿಯ ಮುಳ್ಳಿನೆಡೆಗೆ ಸೇರಿಕೊಂಡಿದ್ದ ಹೆಬ್ಟಾವನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಗೋಳಿತೊಟ್ಟಿನ ಹೈದರ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಹೈದರ್ ಹೆಬ್ಟಾವನ್ನು ಹೊರಗೆಳೆದು ಗೋಣಿ ಚೀಲಕ್ಕೆ ತುಂಬಿಸಿದ್ದು, ಬಳಿಕ ಅರಣ್ಯಾಧಿಕಾರಿಗಳು ಅದಕ್ಕೆ ಉಪ್ಪಿನಂಗಡಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಸಂಜೆ ವೇಳೆಗೆ ಕಾಡಿಗೆ ಬಿಟ್ಟಿದ್ದಾರೆ. ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ
ಮಡಿಕೇರಿ: ಉನೈಸ್ ಅವರಿಗೆ ಸೇರಿದ ಆಟೋರಿಕ್ಷಾಕ್ಕೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಚೆಟ್ಟಳ್ಳಿ ಸಮೀಪದ ಪೊನ್ನತಮೊಟ್ಟೆಯಲ್ಲಿ ನಡೆದಿದೆ. ಬೆಳಗ್ಗಿನ ಜಾವ ಸುಮಾರು 2.30 ಗಂಟೆ ವೇಳೆಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ರಿಕ್ಷಾ ಉರಿಯುವ ಶಬ್ದದಿಂದ ಎಚ್ಚೆತ್ತ ಸ್ಥಳೀಯರು ಬಂದು ನೋಡುವ ಸಂದರ್ಭ ದುಷ್ಕರ್ಮಿಗಳು ಪರಾರಿಯಾದರು. ಮುಖ ಮುಚ್ಚಿಕೊಂಡಿದ್ದ ಇಬ್ಬರು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಚೆಟ್ಟಳ್ಳಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ – ಬೈಕ್ ಢಿಕ್ಕಿ: ಮಹಿಳೆಗೆ ಗಾಯ
ಅಜೆಕಾರು: ಇಲ್ಲಿಗೆ ಸಮೀ ಪದ ಕಾಡುಹೊಳೆಯಲ್ಲಿ ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಮಹಿಳೆ ಗಾಯಗೊಂಡಿದ್ದಾರೆ.
ಹೆಬ್ರಿ ಸಮೀಪದ ಕಬ್ಬಿನಾಲೆ ಗ್ರಾಮದ ಮತ್ತಾವು ನಿವಾಸಿ ವಿಶಾಲಾಕ್ಷಿ ಶೆಟ್ಟಿ (62) ಅವರು ರವಿವಾರ ರಾತ್ರಿ 7 ಗಂಟೆ ಸುಮಾರಿಗೆ ಪುತ್ರ ಸತೀಶ್ ಶೆಟ್ಟಿ ಅವರ ಬೈಕಿನಲ್ಲಿ ಅಜೆಕಾರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಕಾಡು ಹೊಳೆಯಲ್ಲಿ ಹೆಬ್ರಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ವಿಶಾಲಾಕ್ಷಿ ಶೆಟ್ಟಿ ಅವರನ್ನು ಅಜೆಕಾರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾದಚಾರಿಗೆ ಢಿಕ್ಕಿ ಹೊಡೆದು ಪರಾರಿ
ಬಜಪೆ: ಮೂಡುಪೆರಾರ ಗ್ರಾಮದ ರೆಡ್ ಹೌಸ್‌ಬಳಿ ರಸ್ತೆಯ ಬದಿಯಲ್ಲಿ ರವಿವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಪಡುಪೆರಾರದ ಜಗದೀಶ್ (60) ಅವರಿಗೆ ಯಾವುದೋ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ವಾಹನ ಪರಾರಿಯಾಗಿದ್ದು, ಈ ಬಗ್ಗೆ ಜಲಜಾಕ್ಷಿ ಅವರ ದೂರಿನಂತೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.