ಪನ್ವೇಲ್:ಕರಾವಳಿ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನಲ್ ಅಕಾಡೆಮಿ ಪನ್ವೆಲ್ ಇದರ ದಶಮಾನೋತ್ಸವ ಸಂಭ್ರಮವು ಜ. 14ರಂದು ಸಂಜೆ ನ್ಯೂಪನ್ವೆಲ್ ಪಶ್ಚಿಮದ ರಾಯನ್ ಹೈಸ್ಕೂಲ್ ಸಮೀಪದ ಸೆಕ್ಟರ್-10, ನೀಲ್ ಆರ್ಚಿಡ್‌ನ ಶಾಪ್ ನಂಬರ್ 14ರಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ರಸಾಯನಿಯ ಮಹಾಬಲ ಟಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹತ್ತು ವರ್ಷಗಳನ್ನು ಪೂರೈಸಿದ್ದು, ಇದರ ಅಂಗವಾಗಿ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪನ್ವೇಲ್ ಮಹಾನಗರ ಪಾಲಿಕೆಯ ಮೇಯರ್ ಡಾ| ಕವಿತಾ ಚೌತ್ಮೋಲ್ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪನ್ವೆಲ್ ಮಹಾನಗರ ಪಾಲಿಕೆಯ ಡೆಪ್ಯೂಟಿ ಮೇಯರ್ ಸೀತಾತಾಯಿ ಪಾಟೀಲ್, ಪಿಸಿಎಂಸಿಯ ನಗರ ಸೇವಕ, ಸ್ಥಾಯಿ ಸಮಿತಿಯ ಕಾರ್ಯಾಧ್ಯಕ್ಷ, ಕನ್ನಡಿಗ ಸಂತೋಷ್ ಜಿ. ಶೆಟ್ಟಿ, ಪಿಸಿಎಂಸಿಯ ಸ್ಥಳೀಯ ನಗರ ಸೇವಕ ಏಕನಾಥ್ ಗಾಯಕ್ವಾಡ್, ಸಂಸ್ಥೆಯ ಅಧ್ಯಕ್ಷ ಮಹೇಶ್ ಜಿ. ಹೆಗ್ಡೆ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ತಾರನಾಥ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ರತ್ನಾ ಚೌಟ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ವಿಕಾಸ್ ಪಾಟೀಲ್ ಅವರು ಸ್ವಾಗತಿಸಿ, ಕಾರ್ಯ ಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯ ದರ್ಶಿ ತಾರನಾಥ ಶೆಟ್ಟಿ ಅವರು ಪ್ರಾಸ್ತಾ ವಿಕವಾಗಿ ಮಾತನಾಡಿ, ಕರಾವಳಿ ನ್ಪೋರ್ಟ್ಸ್ ಆ್ಯಂಡ್ ಎಜುಕೇಶನಲ್ ಅಕಾಡೆಮಿ ಕಳೆದ ಒಂದು ದಶಕಗಳ ಕಾಲ ಸಲ್ಲಿಸಿದ ಸೇವೆ ಯನ್ನು ಹಾಗೂ ಸಾಧನೆಗಳನ್ನು ವಿವರಿಸಿ, ಸಂಸ್ಥೆಯು ದಶ ಮಾನೋ ತ್ಸವ ಆಚರಿಸಲು ಕಾರಣಿಕರ್ತ ರಾದ ಸಂಸ್ಥೆಯ ಎಲ್ಲ ಸದಸ್ಯರನ್ನು, ಆಡಳಿತ ಮಂಡಳಿಯನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಪನ್ವೇಲ್ ಮಹಾನಗರ ಪಾಲಿಕೆಯ ಮೇಯರ್ ಡಾ| ಕವಿತಾ ಚೌತ್ಮೋಲ್ ಅವರು ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳಿಗೆ ಅಭಿನಂದನೆ ಸಲ್ಲಿಸಿ ದರು. ಸಂಸ್ಥೆಯ ಕಳೆದ ಹತ್ತು ವರ್ಷಗಳ ಕಠಿನ ಪರಿಶ್ರಮ ಮತ್ತು ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಭವಿಷ್ಯದಲ್ಲಿ ಯಶಸ್ಸಿನ ಶಿಖರವನ್ನೇರಲಿ ಎಂದು ಹಾರೈಸಿದರು.
ಪಿಸಿಎಂಸಿ ಆಗಿ ಹೊಸದಾಗಿ ನಿಯುಕ್ತಿಗೊಂಡ ಸೀತಾತಾಯಿ ಪಾಟೀಲ್ ಅವರನ್ನು ಸಂಸ್ಥೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಸೇವಕ ಸಂತೋಷ್ ಜಿ. ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಪ್ರಗತಿಗಾಗಿ ತನ್ನ ಸಹಾಯ, ಸಹಕಾರ ಸದಾಯಿದೆ ಎಂದು ನುಡಿದು ಶುಭಹಾರೈಸಿದರು.
ವೇದಿಕೆಯಲ್ಲಿ ಉತ್ತರ ರಾಯಗಢ ಜಿಲ್ಲಾ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷ ಶ್ರೀನಿವಾಸ ಕೊಡೂರು, ಉದ್ಯಮಿ ಪಿ. ಪ್ರಶಾಂತ್ ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಭಜನ ಕಾರ್ಯಕ್ರಮ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು. ಜತೆ ಕಾರ್ಯದರ್ಶಿ ಪ್ರಸಾದ್ ದಲಾಲ್ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು.