Advertisement
ದೇಶಾದ್ಯಂತ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸಲು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಭಾರತ್ ಮಾಲಾ, ಸಾಗರ್‌ಮಾಲಾಗಳಿಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 80,250 ಕೋ.ರೂ. ಮೀಸಲಿಟ್ಟಿದ್ದಾರೆ.
ಮಂಗಳೂರು ಬೈಪಾಸ್ ರಸ್ತೆ (ಬಿ.ಸಿ. ರೋಡ್- ಕೈಕಂಬ- ಕಟೀಲು- ಮೂಲ್ಕಿ ರಸ್ತೆ ಮತ್ತು ತೊಕ್ಕೊಟ್ಟು- ಮುಡಿಪು- ಮೆಲ್ಕಾರ್ ರಸ್ತೆ ಚತುಷ್ಪ ) ಭಾರತಮಾಲಾ ಯೋಜನೆಯಲ್ಲಿ ಮಂಜೂರುಗೊಂಡಿದ್ದು ಡಿಪಿಆರ್ ಹಂತದಲ್ಲಿದೆ.
ಕಾರ್ಕಳ-ಕುಲಶೇಖರ ರಾ. ಹೆದ್ದಾರಿ ಚತುಷ್ಪಥವಾಗಿ ಉನ್ನತೀಕರಣ, ಮಾಣಿ-ಮೈಸೂರು ರಾ. ಹೆದ್ದಾರಿ ಉನ್ನತೀಕರಣ ಯೋಜನೆ ಮಂಜೂರುಗೊಂಡಿವೆ. ಉಡುಪಿ ಯಲ್ಲಿ ಮಲ್ಪೆ-ಆತ್ರಾಡಿ ಚತುಷ್ಪಥ ರಸ್ತೆ ಪ್ರಗತಿಯಲ್ಲಿದೆ. ಕಾರ್ಕಳ- ಮೂಡುಬಿದಿರೆ- ಬಿ.ಸಿ. ರೋಡ್ ರಸ್ತೆ, ಮಂಗಳೂರು -ಬೆಂಗಳೂರು ರಾ. ಹೆದ್ದಾರಿ 75ರಲ್ಲಿ ಶಿರಾಡಿಘಾಟಿಯಲ್ಲಿ 10,000 ಕೋ.ರೂ. ವೆಚ್ಚದ 23.6 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ, ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ, ಮಂಗಳೂರು -ಚಿತ್ರದುರ್ಗ ರಾ. ಹೆದ್ದಾರಿ, ಬಿ.ಸಿ. ರೋಡ್-ಸುರತ್ಕಲ್ ರಾ. ಹೆದ್ದಾರಿ ಅಷ್ಟಪಥವಾಗಿ ಉನ್ನತೀಕರಣ, ಚಾರ್ಮಾಡಿ ರಸ್ತೆ ಅಭಿವೃದ್ಧಿ ಪ್ರಸ್ತಾವನೆಯಲ್ಲಿವೆ.
Related Articles
ಇನ್ನೊಂದು ಮಹತ್ವಾಕಾಂಕ್ಷೆಯ ಸಾಗರಮಾಲಾದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಯೋಜನೆ ಗಳು ಒಳಗೊಂಡಿವೆ. ಇದರಲ್ಲಿ 3,000 ಕೋ.ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಕರಾವಳಿ ಆರ್ಥಿಕ ವಲಯ (ಕೋಸ್ಟಲ್ ಎಕಾನಮಿಕ್ ಝೋನ್), 100 ಕೋ.ರೂ.ಗಳಲ್ಲಿ ಬೆಂಗರೆ-ನೇತ್ರಾವತಿ ಕಿಂಡಿ ಅಣೆಕಟ್ಟುವರೆಗಿನ ನದಿ ತೀರ ಅಭಿವೃದ್ಧಿ, ಹಳೆ ಬಂದರು-ಕೂಳೂರು ಎನ್‌ಎಂಪಿಟಿವರೆಗೆ ನದಿತೀರದಲ್ಲಿ ರಸ್ತೆ ನಿರ್ಮಾಣ, ಕುಳಾ ಮೀನುಗಾರಿಕೆ ಜೆಟ್ಟಿ ನಿರ್ಮಾಣ, ಹೆಜಮಾಡಿಕೋಡಿ ಜೆಟ್ಟಿ ಅಭಿವೃದ್ಧಿ, ಮಲ್ಪೆ ಮೀನುಗಾರಿಕೆ ಬಂದರು ಅಭಿವೃದ್ಧಿ, ಎನ್‌ಎಂಪಿಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಮುಖ.
Advertisement