Advertisement

ಕರಾವಳಿ: ಸಾವಯವ ಕೃಷಿ ಹೆಚ್ಚಳ: ಉಡುಪಿ-2,201, ದ.ಕ.-1,034 ರೈತರಿಂದ ಜೀವಸ್ನೇಹಿ ಕೃಷಿ

12:20 AM Jan 02, 2023 | Team Udayavani |

ಉಡುಪಿ: ಹಿಂದಿನಿಂದಲೂ ರಾಸಾಯನಿಕ ಕೃಷಿಯತ್ತ ಹೆಚ್ಚು ಮುಖ ಮಾಡದೆ ಸಹಜ ಸಾವಯವ ಕೃಷಿಯನ್ನು ನೆಚ್ಚಿಕೊಂಡಿದ್ದ ಕರಾವಳಿಯ ಕೃಷಿಕರು ಸರಕಾರದ ಪ್ರೋತ್ಸಾಹದ ಪರಿಣಾಮವಾಗಿ ಈಗ ಸಂಪೂರ್ಣ ಸಾವಯವದತ್ತ ಒಲವು ತೋರುತ್ತಿದ್ದಾರೆ.

Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೆಳೆಗಳಿಗೆ ರಾಸಾಯನಿಕಗಳ ಬಳಕೆ ತೀರಾ ಕಡಿಮೆ. ಇದರ ನಡುವೆಯೇ ಪ್ರಸ್ತುತ ಸಂಪೂರ್ಣ ಸಾವಯವ- ನೈಸರ್ಗಿಕ ಕೃಷಿಗೆ ರೈತರು ಹೆಚ್ಚು ಒತ್ತು ನೀಡುತ್ತಿದ್ದಾರೆ.

ಉಡುಪಿಯ 2,201 ರೈತರು 4,601 ಎಕ್ರೆ ಪ್ರದೇಶ ದಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡು ತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ 1,034 ರೈತರು 1,439 ಎಕ್ರೆ ಪ್ರದೇಶದಲ್ಲಿ ಸಾವಯವ ಪದ್ಧತಿ ಅಳವಡಿಸಿದ್ದಾರೆ. ಉತ್ತರ ಕನ್ನಡದಲ್ಲಿ 1,785, ಕೊಡಗಿನಲ್ಲಿ 1,778 ರೈತರು ಇದೇ ಪದ್ಧತಿ ಅನುಸರಿಸುತ್ತಿದ್ದಾರೆ.

ರಾಜ್ಯದಲ್ಲಿ 83,058 ರೈತರು ಸುಮಾರು 2,12,198.82 ಎಕ್ರೆಯಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಭತ್ತ, ರಾಗಿ, ಅಡಿಕೆ, ತೆಂಗು, ಶುಂಠಿ ಜತೆಗೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಸಾವಯವ ಕೃಷಿಗೆ ಒಗ್ಗಿಕೊಂಡಿರುವ ಜಿಲ್ಲೆಗಳಲ್ಲಿ ವಿಜಯಪುರ ಮೊದಲ ಸ್ಥಾನದಲ್ಲಿದೆ. ಇಲ್ಲಿನ 8,722 ರೈತರು 24,964 ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ 20,692 ಎಕ್ರೆ ಪ್ರದೇಶದಲ್ಲಿ 7,661 ರೈತರು ಈ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೇವಲ 197 ರೈತರು 955 ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಸಾವಯವ ಕೃಷಿ ದೃಢೀಕರಣ
ಸಾವಯವ ಅಥವಾ ನೈಸರ್ಗಿಕ ಕೃಷಿ ಅನುಸರಿಸುವ ರೈತ ಅಥವಾ ರೈತರ ಗುಂಪುಗಳ ಪ್ರದೇಶವನ್ನು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ (ಕೆಎಸ್‌ಎಸ್‌ಒಸಿಎ)ಯ ಮೂಲಕ ಸಾವಯವ ಪ್ರಮಾಣೀಕರಣಕ್ಕೆ ನೋಂದಾ ಯಿಸುವ ಮೂಲಕ ಸಾವಯವ ಕೃಷಿ ದೃಢೀಕರಣ ನೀಡಲಾಗುತ್ತದೆ. ನೈಸರ್ಗಿಕ ಕೃಷಿ ಪದ್ಧತಿಯ ವೈಜ್ಞಾ ನಿಕ ಮೌಲೀಕರಣವನ್ನು ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರಾಜ್ಯದ 10 ಹವಾಮಾನ ವಲಯಗಳ ಸಂಶೋಧನ ಕೇಂದ್ರಗಳಲ್ಲಿ ಪ್ರಾಯೋಗಿಕ ಪ್ರಯೋ ಜನಗಳನ್ನು ನಡೆಸಲಾಗುತ್ತಿದೆ.

Advertisement

ಪ್ರೋತ್ಸಾಹ
ಸಾವಯವ ಅಥವಾ ನೈಸರ್ಗಿಕ ಕೃಷಿ ಅಳವಡಿಸಲು ರೈತರಿಗೆ ಅನು ಕೂಲ ಆಗುವಂತೆ ರಾಜ್ಯದ ಎಲ್ಲ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಲಾ 1,000 ಎಕ್ರೆ ಪ್ರದೇಶದ ರೈತರ ಹೊಲಗಳಲ್ಲಿ ನೈಸರ್ಗಿಕ ಕೃಷಿ ಅಧ್ಯಯನಗಳನ್ನು ನಡೆಸಲು ಸರಕಾರ ಯೋಜನೆ ರೂಪಿಸಿದೆ. ಅದರಂತೆ ಯೋಜನ ಪ್ರದೇಶಗಳು, ರೈತರು ಮತ್ತು ಕ್ಲಸ್ಟರ್‌ಗಳನ್ನು ಗುರುತಿಸ ಲಾಗುತ್ತಿದೆ. ಎಲ್ಲ ಕ್ಲಸ್ಟರ್‌ಗಳಲ್ಲೂ ಸಂಬಂಧಪಟ್ಟವರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಯೋಜನ ಪ್ರದೇಶದಲ್ಲಿ ಆಯ್ಕೆಯಾಗಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ಪ್ರತಿ ಎಕ್ರೆಗೆ 7 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.

ರಾಸಾಯನಿಕ ಬಳಕೆಯೇ ಕಡಿಮೆ
ಕರಾವಳಿ ಜಿಲ್ಲೆಯಲ್ಲಿ ರಾಸಾಯನಿಕಗಳ ಬಳಕೆ ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಕೆಲವು ಜಿಲ್ಲೆ ಗಳ  ಹೋಬಳಿ ಯೊಂದರಲ್ಲಿ ಬಳಕೆ ಮಾಡುವಷ್ಟು ರಾಸಾ  ಯನಿಕ ವನ್ನು ಇಲ್ಲಿನ ಇಡೀ ಜಿಲ್ಲೆಯ ರೈತರು ಬಳ ಸುವುದಿಲ್ಲ. ಅಲ್ಲದೆ ಇಲ್ಲಿ ಮಳೆಯ ಪ್ರಮಾಣ ಹೆಚ್ಚಿರು ವುದ  ರಿಂದ ರಾಸಾಯನಿಕಗಳು ಭೂಮಿ ಯನ್ನು ಸೇರುವು ದಿಲ್ಲ, ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಬೆಳೆಗಳಿಗೆ ಔಷಧ ಸಿಂಪಡನೆ ಕೂಡ ಇಲ್ಲಿ ಕಡಿಮೆ. ಹೀಗಾಗಿ ಕರಾವಳಿ ಜಿಲ್ಲೆ ಗಳು ಹಿಂದಿನಿಂದಲೂ ಸಾವಯವ ಪದ್ಧತಿ ಮಾದರಿ ಯಲ್ಲೇ ಕೃಷಿ ಮಾಡಿ ಕೊಂಡು ಬರು ತ್ತಿವೆ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ| ಕೆಂಪೇಗೌಡ ಅವರು ಮಾಹಿತಿ ನೀಡಿದ್ದಾರೆ.

ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿ ಇಳುವರಿ ಪಡೆದ ವಿವಿಧ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಧಾರಣೆ ದೊರಕಿಸಿಕೊಡಲು ಹಲವು ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ಸಾವಯವ ಕೃಷಿಕರ ಸಂಘ ಗಳ ಒಕ್ಕೂಟದ ಮೂಲಕ ಬೆಳೆ ಸಂಸ್ಕರಣೆ, ವರ್ಗೀಕರಣ, ಮೌಲ್ಯವರ್ಧನೆ, ಪ್ಯಾಕಿಂಗ್‌, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
-ಬಿ.ಸಿ. ಪಾಟೀಲ್‌, ಕೃಷಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next