Advertisement

ಕರಾವಳಿಯ ಪ್ರತಿಭೆ; ಹಾಡು ನೀ ಹಾಡು ಪ್ರತೀ ಶನಿವಾರ, ರವಿವಾರ ಪ್ರಸಾರ

12:08 PM Jan 14, 2023 | Team Udayavani |

ಉಡುಪಿ: ಸಹಾಯ ಹಸ್ತ ಮಣಿಪಾಲ ಲಯನ್ಸ್‌ ಚಾರಿಟೇಬಲ್‌ ಫೌಂಡೇಶನ್‌ ಆಯೋಜಕತ್ವದ ಹಾಡು ನೀ ಹಾಡು ಕಾರ್ಯಕ್ರಮ ಪ್ರತೀ ಶನಿವಾರ ಹಾಗೂ ರವಿವಾರ ರಾತ್ರಿ 8 ಗಂಟೆಗೆ ವಿ4 ನ್ಯೂಸ್‌ ಕರ್ನಾಟಕ ಟಿವಿ ಹಾಗೂ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ .

Advertisement

ಕರಾವಳಿಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆರಂಭವಾದ ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗಳು ಸಹಯೋಗ ನೀಡಿದ ಪರಿಣಾಮ, ಉಭಯ ಜಿಲ್ಲೆಗಳ 2, 800 ಶಾಲೆಗಳ ಐದರಿಂದ ಹತ್ತನೇ ತರಗತಿ ಮಕ್ಕಳಿಗೆ ತಲುಪಲು ಸಾಧ್ಯವಾಗಿದೆ.

ಕರಾವಳಿಯ ಐದು ಭಾಗಗಳಲ್ಲಿ 2022 ರಜೂನ್‌ ತಿಂಗಳಿಂದ ನಡೆಸಿದ ಆಡಿಷನ್‌ ನಲ್ಲಿ 500 ಮಕ್ಕಳು ಭಾಗವಹಿಸಿದ್ದರು. ಅವರಲ್ಲಿ ಆಯ್ದ 133 ಮಕ್ಕಳಿಗೆ ಎರಡನೇ ಸುತ್ತಿನ ಆಡಿಷನ್‌ ನಡೆಸಿ, ಮೆಗಾ ಆಡಿಷನ್‌ ಗೆ 40 ಮಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮಣಿಪಾಲದ ಸುಹಾಸ್‌ ಕೌಶಿಕ್‌, ಕೃಪಾ ಪ್ರಸೀದ್‌ ಹಾಗೂ ಮಂಗಳೂರಿನ ಶ್ರೀನಿವಾಸ್‌ ರಾವ್‌ ನೆರವಾದರು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಪಿಟೀಲು ವಾದಕರಾದ ಮೂಲತಃ ಮೈಸೂರಿನ ಸುಹಾಸ್‌ ಕೌಶಿಕ್‌ ಸದ್ಯ MIT ಯ ಮೆಕ್ಯಾನಿಕಲ್‌ ಎಂಜಿನಿಯರ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿರುವ ಸಂಗೀತಾ ಬಾಲಚಂದ್ರ ಮತ್ತೊಬ್ಬ ತೀರ್ಪುಗಾರರು.

ಇವರು ಕೊಂಕಣಿ, ಮರಾಠಿ, ಮಲಯಾಳಂ ಮತ್ತು ತಮಿಳು ಚಿತ್ರಗಳಿಗೂ ಹಾಡು ಹಾಡಿದ್ದಾರೆ. ಕನ್ನಡದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ರನ್ನರ್‌ ಅಪ್‌ ಕೂಡ ಹೌದು. ವಾಹಿನಿಯೊಂದರ ಕನ್ನಡ ಕೋಗಿಲೆ ರಿಯಾಲಿಟಿ ಶೋನ 5 ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಉಡುಪಿಯ ಬೈಲೂರಿನ ಗಣೇಶ್‌ ಕಾರಂತ್‌ ಮತ್ತೋರ್ವ ತೀರ್ಪುಗಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next