Advertisement

ಮಳೆಗಾಲದ ಸ್ಪೆಷಲ್‌ ತಿಂಡಿ ಪತ್ರೊಡೆ ಮಾಡುವ ವಿಧಾನ ಹೀಗೆ..

03:39 PM Jun 25, 2022 | Team Udayavani |

ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆಗೆ ವಿಶೇಷವಾದ ಸ್ಥಾನವಿದೆ.ಪರಿಸರಕ್ಕೆ ಪೂರಕವಾಗಿರುವ ಆಹಾರ ಪದ್ಧತಿ ಕರಾವಳಿಗರ ವಿಶೇಷ.ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹಲಸು,ಅಣಬೆ,ಕೆಸು ಮುಂತಾದ ಪರಿಸರದಲ್ಲಿ ಸಿಗುವ ವಸ್ತುಗಳನ್ನೇ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿರುವುದು ನಮ್ಮ ಕರಾವಳಿಗರ ಹೆಗ್ಗಳಿಕೆ.ಮಳೆಗಾಲ ಬಂತೆಂದರೆ ಊರ ಕೆಸು ಮತ್ತು ಮರ ಕೆಸುವಿನ ಎಲೆಗಳನ್ನು ಬಳಸಿ ತಯಾರಿಸುವ ಪತ್ರೊಡೆಯ ರುಚಿಯನ್ನು ಬಲ್ಲವರೇ ಬಲ್ಲರು..ಹಾಗಾದ್ರೆ  ಮರ ಕೆಸುವಿನ ಪತ್ರೊಡೆ ತಯಾರಿಸುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೊಣ…

Advertisement

ಬೇಕಾಗುವ ಸಾಮಗ್ರಿಗಳು:
ಮರಕೆಸು 30-35
ಹೆಸರು ಕಾಳು 1 1/2 ಕಪ್‌
ಬೆಳ್ತಿಗೆ ಅಕ್ಕಿ 1 1/2  ಕಪ್‌
ತೆಂಗಿನ ತುರಿ 1 ಕಪ್‌
ಒಣಮೆಣಸಿಕಾಯಿ 20-25
ಸಣ್ಣ ನಿಂಬೇ ಗಾತ್ರದ ಹಣೆಸೇ ಹುಳಿ
ಸಣ್ಣ ನಿಂಬೇ ಗಾತ್ರದ ಇಂಗು
ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಬೆಳ್ತಿಗೆ ಅಕ್ಕಿ ಮತ್ತು ಹೆಸ್ರು ಕಾಳನ್ನು ಒಂದೇ ಪಾತ್ರೆಯಲ್ಲಿ ಕನಿಷ್ಠ 3 ಗಂಟೆ ಕಾಲ ನೀರಿನಲ್ಲಿ ನೆನೆಹಾಕಿರಿ.ನೆನೆ ಹಾಕಿದ ಅಕ್ಕಿ ಮತ್ತು ಹೆಸ್ರು ಕಾಳನ್ನು ಮಿಕ್ಸಿಗೆ ಹಾಕಿ.ತೆಂಗಿನ ತುರಿ,ಒಣಮೆಣಸಿನ ಕಾಯಿ, ಹಣೆಸೇ ಹುಳಿ,ಇಂಗು,ಬೆಲ್ಲ ಮತ್ತು ಉಪ್ಪು ಹಾಕಿ,ಜಾಸ್ತಿ ನೀರು ಸೇರಿಸದೆ ಗಟ್ಟಿ ಮಸಾಲೆ ರುಬ್ಬಿರಿ. ಮಸಾಲೆ ಜಾಸ್ತಿ ತೆಳುವಾಗಬಾರದು ಎಲೆಗೆ ಸವರಲು ಸಾಕಷ್ಟು ಗಟ್ಟಯಾದರೆ ಸರಿ.

ಇದೀಗ ಸಿದ್ಧ ಮಾಡಿಟ್ಟುಕೊಂಡ ಮಸಾಲೆಯನ್ನು ಕೆಸುವಿನ ಎಲೆಗಳಿಗೆ ಹಚ್ಚಬೇಕು ಹೀಗೆ ಹಚ್ಚುವ ಸಂದರ್ಭದಲ್ಲಿ ತೊಳೆದು ಒರೆಸಿಟ್ಟಕೊಂಡ ಎಲೆಗಳನ್ನು ಸ್ವತ್ಛ ವಾದ ಜಾಗದಲ್ಲಿ ಇರಿಸಿ,ಎಲೆಗಳ ಹಿಂಭಾಗಕ್ಕೆ ಮಸಾಲೆಯನ್ನು ಕೈಗಳಿಂದ ನಿಧಾನವಾಗಿ ಸವರುತ್ತ ಬರಬೇಕು.ಮಸಾಲೆ ಸವರಿದ ಎಲೆಗಳ ಮೇಲೆ ಮತ್ತು ಎಲೆಗಳನ್ನು ಜೋಡಿಸುತ್ತ ಸುಮಾರು 7 ರಿಂದ 8 ಎಲೆಗಳಿಗೆ ಮಸಾಲೆ ಸವರಿ ಒಂದು ರೋಲ್‌ ಸಿದ್ಧಪಡಿಸಿಕೊಳ್ಳಬೇಕು.(ಎಲೆಗಳಿಗೆ ರೋಲ್‌ ಮಾಡುವ ಸಂದರ್ಭದಲ್ಲಿ ಒಳಭಾಗಕ್ಕೆ ಮತ್ತು ಹೊರಭಾಗಕ್ಕೆ ಮಸಾಲೆಯನ್ನು ಸವರಬೇಕು)ದೊಡ್ಡ ಎಲೆ ತಳದಲ್ಲಿಟ್ಟು ಮಧ್ಯದಲ್ಲಿ ಸಣ್ಣ ಎಲೆಗಳನ್ನಿಟ್ಟರೆ ರೋಲ್‌ ಮಾಡಲು ಸುಲಭ.ಈಗ ಪತ್ರೊಡೆ ರೋಲ್‌ ರೆಡಿ.ಇಂಥ 4-5 ರೋಲ್‌ಗ‌ಳನ್ನು ತಯಾರಿಸಿ.

ಇಡ್ಲಿ ಪಾತ್ರೆಯಲ್ಲಿ ಕಾಲು ಭಾಗದಷ್ಟು ನೀರನ್ನು ಹಾಕಿ ಒಲೆಯ ಮೇಲೆ ಇಡಿ. ಒಲೆಯ ಮೇಲಿಟ್ಟ ಇಡ್ಲಿ ಪಾತ್ರೆಯೊಳಗಡೆ ಪತ್ರೊಡೆ ರೋಲ್‌ನ್ನು ಇಟ್ಟು ಪಾತ್ರೆ ಮುಚ್ಚಿ.45 ನಿಮಿಷಗಳ ಕಾಲ ಬೇಯಿಸಿರಿ. ಆ ಮೇಲೆ ಹೊರತೆಗೆದ ಪತ್ರೊಡೆ ರೋಲ್‌ನ್ನು ಅಡ್ಡಕ್ಕೆ ಕೊಯ್ದು ಬೇಕಾದಷ್ಟು ದಪ್ಪ ತುಂಡು(ಪೋಡಿ)ಗಳನ್ನು ಮಾಡಿರಿ.

Advertisement

ಹುರಿದ ಪತ್ರೊಡೆ ಪೋಡಿ: 
ಒಂದೆರೆಡು ಪತ್ರೊಡೆ ರೋಲ್‌ಗ‌ಳನ್ನು ಅಡ್ಡಕ್ಕೆ ಕೊಯ್ದು ಪೋಡಿ ಮಾಡಿರಿ. ದೋಸೆಕಾವಲಿಗೆ ಎಣ್ಣೆ ಸವರಿ,ಒಲೆಯ ಮೇಲಿಟ್ಟು ಕಾದ ನಂತರ ಅದರ ಮೇಲೆ ಪತ್ರೊಡೆ ಪೋಡಿಗಳನ್ನಿಟ್ಟು ಸ್ವಲ್ಪ ಹೊತ್ತಿನಲ್ಲಿ ಮುಗುಚಿ ಹಾಕಿ ಎರಡೂ ಬದಿಗಳನ್ನು ಎಣ್ಣೆಯಲ್ಲಿ ಕೆಂಪಗೆ ಹುರಿದು ತೆಗೆಯಿರಿ.

ವಿ.ಸೂ: ಹೆಸ್ರುಕಾಳು ಬದಲು ಕಡ್ಲೆಬೇಳೆ ಹಾಕಿಯೂ ಪತ್ರೊಡೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next