ಮಂಗಳೂರು/ಉಡುಪಿ: ಕರಾವಳಿಯ ಹೆಚ್ಚಿನೆಡೆ ಸೋಮವಾರ ಮೋಡ ಕವಿದ ವಾತಾವರಣವಿತ್ತು. ಮಂಗಳೂರು, ಬಂಟ್ವಾಳದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಸುಳ್ಯ, ಪುತ್ತೂರಿನಲ್ಲಿಯೂ ಮೋಡ ಆವರಿಸಿತ್ತು. ಮೂಡಬಿದಿರೆಯಲ್ಲಿ ವಿಪರೀತ ಸೆಕೆ ಇತ್ತು. ಮೂಲ್ಕಿ, ಕಿನ್ನಿಗೋಳಿಯಲ್ಲಿಯೂ ಮೋಡ-ಬಿಸಿಲಿನ ವಾತಾ
ವರಣವಿತ್ತು. ಬೆಳ್ತಂಗಡಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಮೋಡ ಕವಿದಿತ್ತು.
ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ಕಾರ್ಕಳ ತಾಲೂಕಿನ ಕೆಲವೆಡೆ ರವಿವಾರವೂ ಮೋಡ ಕವಿದ ವಾತಾವರಣವಿತ್ತು. ಗಾಳಿ ಕಡಿಮೆ ಆಗಿರುವುದರಿಂದ ಮೋಡ ಇದ್ದರೂ ಕೆಲವು ಪ್ರದೇಶಗಳಲ್ಲಿ ವಿಪರೀತ ಸೆಕೆ ಇತ್ತು.
ಮಳೆ ಸಾಧ್ಯತೆ ಕಡಿಮೆ: ಕರಾವಳಿಯ ಹೆಚ್ಚಿನ ಕಡೆ ಮೋಡ ಇದ್ದರೂ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಮೋಡದ ವಾತಾವರಣ ಇನ್ನೂ ಒಂದೆರಡು ದಿನ ಮುಂದುವರಿಯುವ ಸಂಭವ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.