ಮಂಗಳೂರು/ ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಜೂ. 26ರಂದು ಆರೆಂಜ್ ಅಲರ್ಟ್, ಜೂ. 27ರಿಂದ 29ರ ವರೆಗೆ ಎಲ್ಲೋ ಅಲರ್ಟ್ ಘೊಷಿಸಲಾಗಿದೆ.
ಈ ವೇಳೆ ಧಾರಾಕಾರ ಮಳೆ, ಗುಡುಗು ಸಹಿತ ಗಾಳಿ ಕೂಡ ಇರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಮಳೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಹಲವೆಡೆ ಧಾkಚಕಾರ ಮಳೆಯಾಗಿದೆ.
ಮನೆಗಳಿಗೆ ಹಾನಿ
ಗಾಳಿ ಮಳೆಯಿಂದಾಗಿ ಕಾಪು ತಾಲೂಕಿನ ಹೆಜಮಾಡಿ, ಮೂಡಬೆಟ್ಟು, ನಡಾÕಲು, ಬೆಳಪು ವ್ಯಾಪ್ತಿ ಮನೆಗಳಿಗೆ ಹಾನಿಯಾಗಿದೆ.
Related Articles
ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ ಮಂಗಳೂರಿನಲ್ಲಿ 29.4 ಡಿ.ಸೆ. ಗರಿಷ್ಠ ಮತ್ತು 22.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು