ಕಾರವಾರ: ಇಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಎಂಟು ಖ್ಯಾತ ವಿಜ್ಞಾನಿಗಳು ಸೇರಿದಂತೆ 36 ಜನರಿದ್ದ ಸಿಎಸ್‌ಐಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ (NIO)ಸಂಶೋಧನಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ (ICG) ಸಿಬಂದಿಗಳು ಗುರುವಾರ ರಕ್ಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
”ಆರ್‌ವಿ ಸಿಂಧು ಸಾಧನಾ ಹೆಸರಿನ ಹಡಗು ಇಂಜಿನ್ ವೈಫಲ್ಯವನ್ನು ಹೊಂದಿತ್ತು. ಕಾರವಾರದ ಸಮೀಪದಲ್ಲಿ ಅಪಾಯಕಾರಿಯಾಗಿ ಚಲಿಸುತ್ತಿತ್ತು ಮತ್ತು ದೊಡ್ಡ ತೈಲ ಸೋರಿಕೆಗೆ ಕಾರಣವಾಗಬಹುದು ಎಂದು ಸಂಕಷ್ಟದ ಸಂಕೇತವನ್ನು ಸ್ವೀಕರಿಸಿದಾಗ ಕಡಲ ತೀರದಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು” ಎಂದು ಹಿರಿಯ ಕೋಸ್ಟ್ ಗಾರ್ಡ್ ಅಧಿಕಾರಿ ತಿಳಿಸಿದ್ದಾರೆ.
”ಅತ್ಯಾಧುನಿಕ ಸಂಶೋಧನಾ ನೌಕೆಯು ಎಂಟು ಹಿರಿಯ ವಿಜ್ಞಾನಿಗಳು, ಮೌಲ್ಯಯುತ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರನ್ನು ಹೊತ್ತೊಯ್ಯುತ್ತಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು” ಎಂದು ಅವರು ಹೇಳಿದರು.
”ಪರಿಸರ ಸೂಕ್ಷ್ಮ ಕಾರವಾರ ಕರಾವಳಿ ತೀರದಲ್ಲಿ ಅಪಾಯ, ತೈಲ ಸೋರಿಕೆಗೆ ಕಾರಣವಾಗಿ ಸಮುದ್ರ ಪರಿಸರಕ್ಕೆ ವಿನಾಶಕಾರಿ ಮಾಲಿನ್ಯಕ್ಕೆ ಕಾರಣವಾಗುವ ಸಾಧ್ಯತೆ ಇತ್ತು” ಎಂದು ತಿಳಿಸಿದ್ದಾರೆ.
”ಸವಾಲಿನ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ, ICG ತಂಡವು ಸುರಕ್ಷಿತವಾಗಿ ಗೋವಾಕ್ಕೆ ಹಡಗನ್ನು ಎಳೆದುಕೊಂಡು ತರಲು ರಕ್ಷಣ ಕಾರ್ಯಾಚರಣೆಯನ್ನು ನಡೆಸಿತು. ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಸದೃಢರಾಗಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.