ಕೊಚ್ಚಿನ್ : ಇಲ್ಲಿನ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಸಿಐಎಎಲ್) ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ವೇಳೆಯಲ್ಲಿ ಭಾನುವಾರ ಪತನಗೊಂಡು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
Advertisement
ತರಬೇತಿ ಹಾರಾಟದಲ್ಲಿದ್ದ ಹೆಲಿಕಾಪ್ಟರ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆಗುತ್ತಿದ್ದಂತೆ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಒಬ್ಬ ಸಿಬಂದಿಯ ಕೈ ಮುರಿತಕ್ಕೊಳಗಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಕೋಸ್ಟ್ ಗಾರ್ಡ್ ಎನ್ಕ್ಲೇವ್ CIAL ಸಂಕೀರ್ಣದ ಒಳಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.