Advertisement

ಮೀನುಗಾರರ ರಕ್ಷಣೆಗಾಗಿ ಕೋಸ್ಟ್‌ ಗಾರ್ಡ್‌

07:39 PM Oct 30, 2022 | Team Udayavani |

ಲಂಗರು: ಮನೋಜ್‌ ಬಾಡಕರ್‌ ಕಾರವಾರ: ಮೀನುಗಾರರು ಬಯಸಿದರೆ ಕಾರವಾರ ಕಡಲತೀರದಲ್ಲಿ ಹೊವರ್‌ ಕ್ರಾಫ್ಟ್‌ ಲಂಗರು ಹಾಕಲಿದೆ ಎಂದು ಪಶ್ಚಿಮ ವಲಯದ ಕೋಸ್ಟ್‌ ಗಾರ್ಡ್‌ ಕಮಾಂಡೆಂಟ್‌ ಮನೋಜ್‌ ಬಾಡಕರ್‌ ಹೇಳಿದರು.

Advertisement

ಕಾರವಾರದಲ್ಲಿ ಮೀನುಗಾರರ ಸಂಘಟನೆಗಳ ಜತೆ ಮಾತುಕತೆ ನಡೆಸಿದ ನಂತರ ಅರ್ಗಾದಲ್ಲಿನ ಕೋಸ್ಟ್‌ ಗಾರ್ಡ್‌ ಕಚೇರಿ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೋಸ್ಟ್‌ಗಾರ್ಡ್‌ ಇರುವುದೇ ಮೀನುಗಾರರ ರಕ್ಷಣೆಗೆ ಹಾಗೂ ದೇಶದ ಸಾಗರದ ಗಡಿ ಕಾಯಲು ಎಂದರು. ಮೀನುಗಾರರು ಸಮುದ್ರದ ಕಣ್ಣು, ಕಿವಿ ಇದ್ದ ಹಾಗೆ. ಅವರಿಗೆ ಇರುವ ಸಮುದ್ರದ ಜ್ಞಾನವನ್ನು ಕೋಸ್ಟ್‌ಗಾರ್ಡ್‌ ವಿನಯದಿಂದ ಸ್ವೀಕಾರ ಮಾಡುತ್ತದೆ ಎಂದರು.

ಜಿಲ್ಲಾಡಳಿತ ದಿವೇಕರ್‌ ಕಾಲೇಜು ಪಕ್ಕ ನಮಗೆ 23 ಎಕರೆ ಜಾಗ ಕೊಟ್ಟಿತ್ತು. ಆದರೆ ಅಲ್ಲಿ ಕೆಲ ಹಿತಾಸಕ್ತಿಗಳ ಕಾರಣ ಹಾಗೂ ತಪ್ಪು ತಿಳಿವಳಿಕೆಯಿಂದ ನಮ್ಮ ಕಚೇರಿ ಬರದಂತೆ ತಡೆಯಲಾಯಿತು. ಕಚೇರಿ ಕಟ್ಟಡ ಬೇಡ ಎಂದು ಚಳವಳಿ ಆಯಿತು. ಆದರೆ ನಾವು ದೇಶದ ರಕ್ಷಣೆ ದೃಷ್ಟಿಯಿಂದ ಕೋಸ್ಟ್‌ಗಾರ್ಡ್‌ ಅವಶ್ಯಕತೆಯನ್ನು ಕೋರ್ಟ್‌ಗೆ ಮನವರಿಕೆ ಮಾಡಿ ಕೇಸ್‌ ಗೆದ್ದಿದ್ದವು. ಆದರೂ ಕಟ್ಟಡ ಮಾಡಲಿಲ್ಲ. ನಂತರ ಜಿಲ್ಲಾಡಳಿತ ನಮಗೆ ನೀಡಿದ ಲ್ಯಾಂಡ್‌ ವಾಪಸ್‌ ಪಡೆದಿದೆ. ಈಗ ಅಲ್ಲಿ ಹೋವರ್‌ ಕ್ರಾಫ್ಟ್‌ ಇಡಲು ಯೋಚನೆ ಇದೆ. ಅಲ್ಲಿ ನಾವು ಶಾಶ್ವತ ಕಟ್ಟಡ ಕಟ್ಟಲ್ಲ. ಜನರಿಗೆ ಓಡಾಡಲು ನಿರ್ಬಂಧ ಹೇರಲ್ಲ. ಕಾರವಾರ ಮೂಲದವನಾಗಿ ಇಷ್ಟು ಆಶ್ವಾಸನೆ ಕೊಡಬಲ್ಲೆ ಎಂದರು.

ಈಗ ಬೀಚ್‌ನಲ್ಲಿರುವ ಹೋಟೆಲ್‌, ಗಾರ್ಡನ್‌, ಕಚೇರಿ, ಕಾಲೇಜು ಕಟ್ಟಡದಂತೆ ನಮ್ಮ ಕೋಸ್‌ rಗಾರ್ಡ್‌ ಚಟುವಟಿಕೆಗಳು ಸಹ ಇರುತ್ತವೆ. ಸಮುದ್ರದ ಅವಘಡ, ಪ್ರವಾಹ ಮುಂತಾದ ಸಂದರ್ಭಗಳಲ್ಲಿ ಹೋವರ್‌ ಕ್ರಾಫ್ಟ್‌ ಮಂಗಳೂರಿನಿಂದ ಬರಲು ಸಮಯ ಬೇಕು. ಇದರಿಂದ ಸಂಕಷ್ಟದಲ್ಲಿರುವ ಜೀವಗಳು ನಷ್ಟವಾಗುತ್ತವೆ ಎಂದರು. ಇದನ್ನು ತಪ್ಪಿಸಲು ಹೋವರ್‌ ಕ್ರಾಫ್ಟ್‌ (ನೀರು ಮತ್ತು ನೆಲದ ಮೇಲೆ ಚಲಿಸುವ ಅತ್ಯಾಧುನಿಕ ಹಡಗು) ಕಾರವಾರ ರವೀಂದ್ರನಾಥ ಟಾಗೋರ್‌ ಬೀಚ್‌ ನಲ್ಲಿಡುವುದು ಅವಶ್ಯ ಎಂದರು.

Advertisement

ಎರಡು ವರ್ಷದಲ್ಲಿ ಸ್ವಂತ ಕಚೇರಿ: ಕಾರವಾರದ ಅಮದಳ್ಳಿಯಲ್ಲಿ ಕೋಸ್ಟ್‌ ಕಚೇರಿಗೆ 23 ಎಕರೆ ಜಾಗ ಖರಿದೀಸಿದ್ದು, ಕಟ್ಟಡ ನಿರ್ಮಾಣ ಪ್ರಾರಂಭವಾಗಿದೆ. ಎರಡು ವರ್ಷಗಳಲ್ಲಿ ಕೋಸ್ಟ್‌ಗಾರ್ಡ್‌ ಸ್ವಂತ ಕಚೇರಿ ಹೊಂದಲಿದೆ ಎಂದು ಹೇಳಿದರು. ಕಾರವಾರ ಬಂದರು ಬ್ರೆಕ್‌ ವಾಟರ್‌ ಆಚೆ ಗಂಗೆಕೊಳ್ಳದ ಕಡೆಗೆ ಬರ್ತ (ಹಡಗು ನಿಲ್ದಾಣ ಧಕ್ಕೆ) ನಿರ್ಮಿಸಲು ಜಾಗವನ್ನು ಬಂದರು ಇಲಾಖೆ ಬಳಿ ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಮುಂದೆ ಅಲ್ಲಿ ಕೋಸ್‌ rಗಾರ್ಡ್‌ ಹಡಗು ಧಕ್ಕೆ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಡ್ರಗ್ಸ್‌ ಅಕ್ರಮ ಹಿಡಿಯುವಲ್ಲಿ ಮುಂದೆ: ಡ್ರಗ್ಸ್‌ ಸಾಗಾಣಿಕೆ ಹಿಡಿಯುವಲ್ಲಿ ಕೋಸ್ಟ್‌ಗಾರ್ಡ್‌ ಮುಂದಿದೆ. ಈಚೆಗೆ ಗುಜರಾತ್‌ ಸಮುದ್ರದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಸಾವಿರ ಕೋಟಿ ಮೊತ್ತದ ಡ್ರಗ್ಸ್‌ ಕೋಕೆನ್‌ನನ್ನು ಹಿಡಿಯಲಾಗಿದೆ ಎಂದರು.

ಸೆಟಸೈಟ್‌ ಫೋನ್‌ ಭಾರತದಲ್ಲಿ ನಿಷೇಧವಿದೆ. ಪಕ್ಕದ ದೇಶಗಳಲ್ಲಿ ಸೆಟಲೈಟ್‌ ಫೋನ್‌ ಬಳಕೆ ಇದೆ. ನಮ್ಮ ದೇಶದ ಮಾರ್ಗವಾಗಿ ಹಡಗಿನಲ್ಲಿ ಹಾದು ಹೋಗುವವರು ಬಳಸಿರುವ ಸಾಧ್ಯತೆ ಇದೆ. ಆದರೂ ನಾವು ನಮ್ಮ ಸಮುದ್ರ ತೀರದಲ್ಲಿ ಸೆಟಲೈಟ್‌ ಫೋನ್‌ ಬಳಸದಂತೆ ಎಚ್ಚರಿಕೆ ನೀಡುತ್ತೇವೆ. ಒಳನಾಡಿನಲ್ಲಿ ಇಂಥ ಪ್ರಕರಣ ನಡೆದರೆ ಅದು ಕೋಸ್ಟ್‌ಗಾರ್ಡ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋಸ್ಟ್‌ಗಾರ್ಡ್‌ ಕಮಾಂಡೆಂಟ್‌ ನುಡಿದರು.

ಕಾರವಾರಿಗರು ಆಸೆಬುರಕರಲ್ಲ, ಮಹಾತ್ವಾಕಾಂಕ್ಷಿಗಳು: ಕಾರವಾರಿಗರು ಆಸೆಬುರಕರಲ್ಲ, ಮಹಾತ್ವಾಕಾಂಕ್ಷಿಗಳು ಎಂದು ಕೋಸ್ಟ್‌ಗಾರ್ಡ್‌ ಪಶ್ಚಿಮ ವಲಯದ ಕಮಾಂಡೆಂಟ್‌ ಮನೋಜ್‌ ಬಾಡಕರ್‌ ನುಡಿದರು.

ಕಾರವಾರದವರು 6 ಸಾವಿರ ವೇತನಕ್ಕೆ ಇಲ್ಲಿರುತ್ತಾರೆ. ಮುಂಬಯಿನಲ್ಲಿ 45 ಸಾವಿರ ವೇತನ ಪಡೆಯುವ ಕಾರವಾರಿಗ ಮರಳಿ ಕಾರವಾರಕ್ಕೆ ಬರಲು ತುದಿಗಾಲಲ್ಲಿ ನಿಂತಿರುತ್ತಾನೆ. ಕಾರವಾರದಲ್ಲಿ ಕೈಗಾರಿಕೆಗಳು ಆಗಬೇಕು. ಆಗ ಇಲ್ಲಿನ ಪರಿಸ್ಥಿತಿ ಬದಲಾಗಲು ಸಾಧ್ಯ ಎಂದರು.

ಯುವಕರು ಮಹಾತ್ವಾಕಾಂಕ್ಷಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಯೋಜನೆ ಜಾರಿಯಲ್ಲಿ ಗೋವಾ ಮಾದರಿಯನ್ನು ನಾವು ಅನುಸರಿಸಬೇಕು ಎಂದರು. ಕಾರವಾರದ ಕೋಸ್ಟ್‌ಗಾರ್ಡ್‌ ಅಧಿಕಾರಿ ಸುರೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next