Advertisement

Coart: ಚೆಕ್‌ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ

08:04 PM Sep 13, 2024 | Team Udayavani |

ಉಡುಪಿ: ಚೆಕ್‌ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.

Advertisement

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಚಿಟ್ಸ್‌ ವ್ಯವಹಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಕರ ಜ್ಯೋತಿ ಚಿಟ್ಸ್‌ ಪೈ.ಲಿ. ಕಂಪೆನಿಯ ಚಿಟ್ಸ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ 10 ಲ. ರೂ. ಚಿಟ್ಸ್‌ ವ್ಯವಹಾರದ ಚಂದಾದಾರರಾದ ಇಬ್ರಾಹಿಂ ಹುಸೇನ್‌ ಬ್ಯಾರಿಯವರು 2 ಚಿಟ್ಸ್‌ ಚಂದಾದಾರಿಕೆ ಪಡೆದು ಅದರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಣವನ್ನು ಪಡೆದುಕೊಂಡಿದ್ದರು.

ಹಣದ ಮರುಪಾವತಿಗಾಗಿ ಚೆಕ್‌ ನೀಡಿದ್ದರು. ಆ ಚೆಕ್‌ ಅಮಾನ್ಯಗೊಂಡ ಬಗ್ಗೆ 2 ಪ್ರತ್ಯೇಕ ಪ್ರಕರಣವನ್ನು ಮಂಗಳೂರಿನ 4ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಂಸ್ಥೆಯವರು ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಪಾರ್ವತಿ ಸಿ.ಎಚ್‌. ಅವರು ಮಕರ ಜ್ಯೋತಿ ಪ್ರೈ.ಲಿ. ಕಂಪೆನಿಯ ಚಿಟ್ಸ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿರಲಿಲ್ಲ. ಕಾನೂನು ಬದ್ಧವಾಗಿ ವ್ಯವಹಾರವನ್ನೂ ನಡೆಸಿಲ್ಲ. ಆರೋಪಿಗಳು ಯಾವುದೇ ಕಾನೂನು ಬದ್ಧ ಬಾಧ್ಯತೆಗಾಗಿ ಚೆಕ್‌ ನೀಡಿರುವುದಿಲ್ಲ ಎಂದು ಮನಗೊಂಡು ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದ್ದಾರೆ. ಆರೋಪಿಯ ಪರ ವೈ.ಟಿ. ರಾಘವೇಂದ್ರ, ಕ್ಲಿಂಟನ್‌ ಡಿ’ಸಿಲ್ವಾ, ಮಂಗಳೂರಿನ ಸಂಧ್ಯಾ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next