Advertisement
ನಿಜಕ್ಕಾದರೆ ಬಿಸಿಸಿಐ ಇನ್ನೂ ಈ ವಿಚಾರವಾಗಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಬದಲಾಗಿ ಸಂಭಾವನೆಯನ್ನು ನಿಗದಿಗೊಳಿಸಲೆಂದೇ ಸರ್ವೋಚ್ಚ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಗಳ ಕಮಿಟಿ (ಸಿಒಎ) ಯು 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಇದು ಕೋಚ್ ಹಾಗೂ ಅವರ ಸಹಾಯಕ ಸಿಬಂದಿಗಳ ವೇತನವನ್ನು ಜು. 19ರಂದು ನಡೆಯುವ ಸಭೆಯಲ್ಲಿ ನಿಗದಿಗೊಳಿಸಲಿದೆ. ಬಳಿಕ ಜು. 22ರಂದು ಸಂಭಾವನೆ ಕುರಿತ ತನ್ನ ವರದಿಯನ್ನು ಸಿಒಎಗೆ ನೀಡಲಿದೆ.
Related Articles
ತನ್ನ ಸಹಾಯಕ ಸಿಬಂದಿಗಳ ನೇಮಕಾತಿಯನ್ನು ಅಂತಿಮಗೊಳಿಸಲು ಕೋಚ್ ರವಿ ಶಾಸ್ತ್ರಿ ಸೋಮವಾರ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಯನ್ನು ಭೇಟಿಯಾಗಲು ನಿರ್ಧರಿಸಿದ್ದು ಶನಿವಾರದ ಇನ್ನೊಂದು ಪ್ರಮುಖ ಬೆಳವಣಿಗೆಯಾಗಿದೆ.
Advertisement
ಮ್ಯಾನೇಜರ್ ಹುದ್ದೆಗೂ ಅರ್ಜಿ ಕರೆದ ಬಿಸಿಸಿಐಮುಂಬಯಿ: ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರನ್ನು ಟೀಮ್ ಇಂಡಿಯಾದ ನೂತನ ಕೋಚ್ ಆಗಿ ನೇಮಕ ಮಾಡಿದ ಬೆನ್ನಲ್ಲೇ ಭಾರತ ತಂಡದ ಮ್ಯಾನೇಜರ್ ಹುದ್ದೆಗೂ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿರಬೇಕು. ಖಾಸಗಿ ಅಥವಾ ಸಾರ್ವಜನಿಕ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಅಭ್ಯರ್ಥಿಗಳ ವಯಸ್ಸು 60 ವರ್ಷ ಮೀರಿರಬಾರದು ಎನ್ನುವುದು ಬಿಸಿಸಿಐಯ ಮುಖ್ಯ ನಿಯಮಗಳಾಗಿವೆ. ಭಾರತ ತಂಡದ ಮ್ಯಾನೇಜರ್ ಹುದ್ದೆಯ ಅವಧಿ ಒಂದು ವರ್ಷದ್ದಾಗಿದೆ. ಅರ್ಹ ಅಭ್ಯರ್ಥಿ ಗಳು ಜುಲೈ 21ರೊಳಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಕಪಿಲ್ ಮಲ್ಹೋತ್ರಾ ಭಾರತ ತಂಡದ ಮ್ಯಾನೇಜರ್ ಆಗಿದ್ದರು. ಈ ಪ್ರವಾಸದಲ್ಲೇ ಕೋಚ್ ಕುಂಬ್ಳೆ ಮತ್ತು ನಾಯಕ ಕೊಹ್ಲಿ ನಡುವಿನ ಭಿನ್ನಮತ ಸ್ಫೋಟಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ವರದಿ ಕೇಳಿದಾಗ, ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖೀ ಸುವಲ್ಲಿ ಮಲ್ಹೋತ್ರಾ ವಿಫಲರಾಗಿದ್ದರು. ಹೀಗಾಗಿ ತಂಡಕ್ಕೆ ವೃತ್ತಿಪರ ಕೋಚ್ ಓರ್ವರನ್ನು ನೇಮಿಸು ವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.