Advertisement

ಗುಜರಾತ್ ಟೈಟಾನ್ಸ್ ಕೋಚ್‌ ಹುದ್ದೆ ತ್ಯಜಿಸಲಿದ್ದಾರೆ ಗ್ಯಾರಿ ಕರ್ಸ್ಟನ್‌

11:39 AM Apr 28, 2022 | Team Udayavani |

ಮುಂಬೈ: ಐಪಿಎಲ್‌ ಕೂಟದ ಹೊಸ ತಂಡವಾಗಿರುವ ಗುಜರಾತ್‌ ಟೈಟಾನ್ಸ್‌ ಈ ಬಾರಿ ಅದ್ಭುತ ನಿರ್ವಹಣೆ ನೀಡುತ್ತಿದೆ. ಭಾರತೀಯ ತಂಡದ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌ ಅವರು ಗುಜರಾತ್‌ ತಂಡದ ಕೋಚ್‌ ಮತ್ತು ಮೆಂಟರ್‌ ಆಗಿರುವುದು ಇದಕ್ಕೆ ಕಾರಣವಿರಬಹುದು. ಆದರೆ ಕರ್ಸ್ಟನ್‌ ಈ ಐಪಿಎಲ್‌ ಮುಗಿದ ಬಳಿಕ ಕೋಚ್‌ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದು ಗುಜರಾತ್‌ ಪಾಲಿಗೆ ಬೇಸರದ ವಿಷಯವಾಗಿದೆ.

Advertisement

ಡೈಲಿ ಮೈಲ್‌ ಪತ್ರಿಕೆಯ ವರದಿ ಪ್ರಕಾರ ಭಾರತದ 2011ರ ವಿಶ್ವಕಪ್‌ ವಿಜೇತ ತಂಡದ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌ ಮತ್ತು ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನು ಅನುಕ್ರಮವಾಗಿ ಇಂಗ್ಲೆಂಡ್‌ ತಂಡದ ನೂತನ ಮುಖ್ಯ ಕೋಚ್‌ ಮತ್ತು ಟೆಸ್ಟ್‌ ನಾಯಕರನ್ನಾಗಿ ಹೆಸರಿಸಲಾಗಿದೆ. ಜೋ ರೂಟ್‌ ನಾಯಕತ್ವದಿಂದ ಹಿಂದೆ ಸರಿದ ಕಾರಣ ಸ್ಟೋಕ್ಸ್‌ ಅವರನ್ನು ಹೆಸರಿಸಲಾಗಿದೆ.

ಇದನ್ನೂ ಓದಿ:ಪಿಕೆ, ಟೈಗರ್ ಜಿಂದಾ ಹೈ, ಸಂಜು ದಾಖಲೆಗಳನ್ನು ಮುರಿದ ಕೆಜಿಎಫ್ 2 ಹಿಂದಿ ವರ್ಷನ್

ಕಳೆದ ವರ್ಷದ ಫೆಬ್ರವರಿಯಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡದ ನೀರಸ ಪ್ರದರ್ಶನದ ಹಿನ್ನೆಲೆಯಲ್ಲಿ ರೂಟ್‌ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದರು. ಕರ್ಸ್ಟನ್‌ ಅವರು ಸದ್ಯ ಸಾಗುತ್ತಿರುವ ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್‌ ತಂಡದ ಕೋಚ್‌ ಹುದ್ದೆ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next