Advertisement

ಅಭಿವೃದ್ಧಿಗೆ ಸಹಕಾರ ಸಂಘ ಪೂರಕ

03:40 PM Aug 14, 2022 | Team Udayavani |

ಕುಕನೂರು: ರಾಷ್ಟ್ರಾಭಿವೃದ್ಧಿಗೆ ಗ್ರಾಮೀಣ ಪ್ರದೇಶಗಳ ಸಹಕಾರಿ ಸಂಘಗಳು ಊರುಗೋಲು ಇದ್ದಂತೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ನಿಮಿಸಲಾದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಗ್ರಾಮಗಳಲ್ಲಿ ಸ್ಥಾಪಿಸಲಾಗುವ ಸ್ವ ಸಹಾಯಕ ಸಂಘಗಳು ರಾಷ್ಟ್ರದ ಪ್ರಗತಿಗೆ ಸಹಕಾರಿಯಾಗಿವೆ. ಸಂಘಗಳ ಅಭಿವೃದ್ಧಿಗೆ ಸರಕಾರ ಕೂಡ ಸಾಲದ ರೂಪದಲ್ಲಿ ಸಾಕಷ್ಟು ಅನುದಾನ ನೀಡುತ್ತಿದೆ. ಅದರ ಸದ್ಬಳಕೆ ಹೊಣೆ ಸಂಘಗಳ ಮೇಲೆ ಇದೆ. ದ್ಯಾಂಪೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅತೀ ಕಡಿಮೆ ಅವಧಿಯಲ್ಲಿ ಮಾದರಿ ಕಟ್ಟಡ ಅತ್ಯಂತ ಸುಂದರವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣವಾಗಿದೆ ಎಂದರು.

ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಸಚಿವ ಹಾಲಪ್ಪ ಆಚಾರ್‌ ಅವರು ಅನುದಾನ ನೀಡಿ ಸಹಕಾರಿ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದನೆಯಿಂದ ಹಲವಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಕೊರೊನಾ ವೇಳೆಯಲ್ಲಿ ರೈತರಿಗೆ ಒಕ್ಕೂಟದಿಂದ ಹೆಚ್ಚಿನ ಬೆಲೆಯನ್ನು ಈ ಸಂಘ ನೀಡಿದೆ. ಒಕ್ಕೂಟ ದರ ಕಡಿಮೆ ಮಾಡಿದಾಗಲೂ ಸಂಘ ತನ್ನ ಲಾಭಾಂಶದಲ್ಲಿ ರೈತರಿಗೆ ಹೆಚ್ಚಿನ ದರ ನೀಡಿದೆ ಎಂದರು.

ರಾಬಕೊ ಒಕ್ಕೂಟದ ನಿರ್ದೇಶಕ ವೆಂಕನಗೌಡ ಹಿರೇಗೌಡ್ರು, ಉಪವ್ಯವಸ್ಥಾಪಕ ಜಿ.ಐ. ಪಡಸಲಗಿ, ರವಿತೇಜ ಅಬ್ಬಿಗೇರಿ ಮಾತನಾಡಿದರು.

Advertisement

ಹಾಲು ಉತ್ಪಾದಕರಿಗೆ ಹಸಿರು ಶಾಲು ಹಾಕಿ ತೆಂಗಿನ ಗಿಡ ವಿತರಿಸಲಾಯಿತು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡ ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಸಂಘದ ಅಧ್ಯಕ್ಷ ಬಸವರಾಜಸ್ವಾಮಿ ಕಂದಗಲ್ಲಮಠ, ಉಪಾಧ್ಯಕ್ಷ ಈರಪ್ಪ ಸದರಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಆಡೂರು, ರಾಬಕೊ ನಿರ್ದೇಶಕಿ ಕವಿತ ಗುಳಗಣ್ಣವರ್‌, ಕ್ಷೇತ್ರ ಸಹಾಯಕ ಬಸವರಾಜ ಯರದೊಡ್ಡಿ, ಸಮಾಲೋಚಕ ಸೋಮಶೇಖರ ಗುರಿಕಾರ, ಕ್ಷೇತ್ರ ಸಹಾಯಕಿ ರತ್ಮಮ್ಮ ಹಕ್ಕಂಡಿ, ಕಾರ್ಯದರ್ಶಿ ಶಿವಕುಮಾರ ಸಿದ್ನಕೊಪ್ಪ, ಗ್ರಾಪಂ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು, ಮುಖಂಡರಿದ್ದರು. ಜಗತ್ತಿನಲ್ಲಿ ದೇವಾನು ದೇವತೆಗಳನ್ನು ಕಾಮಧೇನು, ಕಲ್ಪವೃಕ್ಷಕ್ಕೆ ಹೊಲಿಸುತ್ತಾರೆ. ಕಾಮಧೇನು ನಂಬಿದರೆ ಕಷ್ಟ ದೂರ ಆಗುತ್ತದೆ. ಆ ನಿಟ್ಟಿನಲ್ಲಿ ದ್ಯಾಂಪೂರಿನ ಜನತೆ ಹಾಗೂ ಸುತ್ತಲಿನ ಜನತೆ ಕಾಮಧೇನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಹಾಲು ಉತ್ಪಾದಕರಿಗೆ ತೆಂಗಿನ ಸಸಿ ಸಹ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ವಿಭಿನ್ನ ಕಾರ್ಯ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಮುಂದಿನ ದಿನಗಳಲ್ಲಿ ರೈತರಿಗೆ ತೆಂಗಿನ ಗಿಡದಿಂದ ಫಲ ಸಹ ಸಿಗುತ್ತದೆ ಎಂದರು. –ಶ್ರೀಮಹಾದೇವ ದೇವರು, ಅನ್ನದಾನೀಶ್ವರ ಶಾಖಾಮಠ

Advertisement

Udayavani is now on Telegram. Click here to join our channel and stay updated with the latest news.

Next