ಶಿರಸಿ: ಪ್ರಸಿದ್ದ ಅಡಿಕೆ ಬೆಳೆಗಾರರ ಸಂಸ್ಥೆ ಟಿಎಸ್ ಎಸ್ ನಡೆಸುವ ತಾಲೂಕಿನ ಹುಲೇಕಲ್ ನ ಸೂಪರ್ ಮಾರುಕಟ್ಟೆಯ ವಿಸ್ತೃತ ಕಟ್ಟಡ ಹಾಗೂ ಹುಲೆಕಲ್ ಹಬ್ಬದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್ ಎಸ್ ಮಾದರಿಯ ಕಾರ್ಯ ಮಾಡುತ್ತಿದೆ. ಸಹಕಾರಿ ಸಂಘಗಳು ಇನ್ನಷ್ಟು ಕೃಷಿಗೆ ಸಹಾಯ ಮಾಡುವ ಕಾರ್ಯ ಮಾಡಬೇಕು. ಸಹಕಾರಿ ತತ್ವಗಳ ಮೂಲಕ ಇನ್ನು ಹೆಚ್ಚು ಕೃಷಿಗೆ ಸಹಾಯ ಮಾಡಬೇಕು ಎಂದರು.
ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ಗ್ರಾ.ಪಂ. ಅಧ್ಯಕ್ಷೆ ತನುಜಾ ನೇತ್ರೇಕರ್, ಸ್ಥಳೀಯ ಸೊಸೈಟಿ ಅಧ್ಯಕ್ಷ ವೀರೇಂದ್ರ ಗೌಡರ್ , ಬಾಲಚಂದ್ರ ಹೆಗಡೆ, ಚಂದ್ರಶೇಖರ ಹೆಗಡೆ ಹೂಡ್ಲಮನೆ ಇತರರು ಇದ್ದರು.
ಹುಲೇಕಲ್ ಹಬ್ಬದ ನಿಮಿತ್ತ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗೆ ಸ್ವಾದ ವೈವಿಧ್ಯ, ಸುಪರ್‌ಮಿನಿಟ್ ಸ್ಪರ್ಧೆ, ಮಕ್ಕಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು , ಆಲೆಮನೆ ಹಬ್ಬ, ಕೃಷಿ, ಗೃಹೋಪಯೋಗಿ ವಸ್ತುಗಳ ರಿಯಾಯತಿ ಮಾರಾಟ ಎರಡು ದಿನಗಳ ಕಾಲದ ಹಬ್ಬದಲ್ಲಿ ಆಯೋಜಿಸಲಾಗಿದೆ.