Advertisement

ಸಹಕಾರ ಕ್ಷೇತ್ರಕ್ಕೆ 125 ವರ್ಷಗಳ ಸುದೀರ್ಘ ಇತಿಹಾಸವಿದೆ: ಪ್ರಶಾಂತ ಮುಧೋಳ

10:47 PM Dec 02, 2022 | Team Udayavani |

ಕುಳಗೇರಿ ಕ್ರಾಸ್: ಸಹಕಾರ ಕ್ಷೇತ್ರಕ್ಕೆ 125 ವರ್ಷಗಳ ಸುದೀರ್ಘ ಇತಿಹಾಸವಿದೆ. ಜಾಗತೀಕರಣ, ಉದಾರೀಕರಣ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪೈಪೋಟಿಯ ನಡುವೆಯೂ ಸಹಕಾರ ವಲಯ ಇವತ್ತು ಪ್ರಭಲವಾಗಿದೆ ಎಂದರೆ ಅದಕ್ಕೆ ಬಹುಮುಖ್ಯ ಕಾರಣ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ. ಅವರು ಕರ್ನಾಟಕ ಸಹಕಾರಿ ಕ್ಷೇತ್ರದ ದಂತ ಕತೆ ಎಂದು ರೋಣ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಬಣ್ಣಿಸಿದರು.

Advertisement

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ನುಡಿ ವೈಭವ-2022 ಉಪನ್ಯಾಸ ಕಾರ್ಯಕ್ರಮದಲ್ಲಿ ಸಹಕಾರಿ ರಂಗಕ್ಕೆ ಕನ್ನಡಿಗರ ಕೊಡುಗೆ ಎಂಬ ವಿಷಯದ ಕುರಿತು ಮಾತನಾಡಿದರು. ಎಲ್ಲರಿಗಾಗಿ ತಾನು ನನಗಾಗಿ ಎಲ್ಲರೂ ಎಂಬ ತತ್ವದಡಿಯಲ್ಲಿ ಪರಸ್ಪರ ಸಹಕಾರ ಮತ್ತು ನಂಬಿಕೆ ಆದಾರದ ಮೇಲೆ ಸಹಕಾರಿ ತತ್ವ ಪ್ರತಿಯೊಬ್ಬರನ್ನು ಸದೃಡರನ್ನಾಗಿಸುವ ಶಕ್ತಿ ಸಹಕಾರಿ ರಂಗಕ್ಕಿದೆ. ಏಷ್ಯಾ ಖಂಡದಲ್ಲಿಯೇ ಪ್ರಥಮವಾಗಿ ಸ್ಥಾಪನೆಯಾದದ್ದು ಕರ್ನಾಟಕದಲ್ಲಿ ಅದಕ್ಕೆ ಭದ್ರ ಬುನಾದಿ ಹಾಕಿದವರು ಕಣಗಿನಹಾಳದ ಸಿದ್ಧನಗೌಡ ಪಾಟೀಲರು. ಸಾಮಾನ್ಯ ವರ್ಗದಲ್ಲಿ ಜನಿಸಿದ ಅವರು ಕರ್ನಾಟಕ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘವಾದುದು ಎಂದು ಹೇಳಿದರು.

ಸಾನಿದ್ಯವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಸಹಕಾರಿ ಚಳುವಳಿಯ ತೊಟ್ಟಿಲು ಕಣಗಿನಹಾಳ. ಸಿದ್ದನಗೌಡರು ಚಿಕ್ಕ ಗ್ರಾಮದಲ್ಲಿ ಬಿತ್ತಿದ ಸಹಕಾರಿ ತತ್ವದ ಬೀಜ ಇಂದು ಹೆಮ್ಮರವಾಗಿ ಬೆಳೆದು ದೇಶಾದ್ಯಾಂತರ ಕೋಟ್ಯಾಂತರ ಜನರ ಬದುಕಿಗೆ ದಾರಿದೀಪವಾಗಿದೆ ಎಂದು ಹೇಳಿದರು.

ಧಾರವಾಡ ಹಾಲು ಉತ್ಪಾಧಕರ ಮಹಾಮಂಡಳದ ನಿರ್ದೇಶಕ ಎಚ್ ಜಿ ಹಿರೇಗೌಡ್ರ, ಧಾರವಾಡ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್ ಡಿ ಕೊಳ್ಳಿಯವರ, ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಆರ್ ಸಿ ಯಕ್ಕುಂಡಿ, ಚಂದ್ರೇಶಖರ ಕರಿಯಪ್ಪನವರ, ಎನ್ ಎನ್ ಸರಾಫ್, ಬಿ ಬಿ ಐನಾಪೂರ, ಚಂದ್ರು ದಂಡಿನ, ಬಸವರಾಜ ಐನಾಪೂರ, ಯಲ್ಲಪ್ಪಗೌಡ ಪಾಟೀಲ, ಪ್ರವೀಣ ಅಪ್ಪೋಜಿ ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು, ರಮೇಶ ಐನಾಪೂರ ವಂದಿಸಿದರು.

ಸಿದ್ದನಗೌಡ ಪಾಟೀಲರು ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆಗಾಗಿ ಗದುಗಿನಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಪಠ್ಯದಲ್ಲಿ ಅವರ ಕುರಿತು ಪಾಠವನ್ನು ಅಳವಡಿಸಿ ಅವರ ಜೀವನ ಸಂದೇಶ ಎಲ್ಲರಿಗೂ ತಿಳಿಯುವಂತೆ ಮಾಡಬೇಕೆಂದು ಪುಜ್ಯ ಶಾಂತಲಿಂಗ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next