Advertisement

ಕಲ್ಯಾಣ ಕರ್ನಾಟಕಕ್ಕೆ ಸಿಎಂ ಭೇಟಿ: ಕಾಂಗ್ರೆಸ್‌ ವಾಗ್ಧಾಳಿ

08:22 PM Sep 17, 2022 | Team Udayavani |

ಬೆಂಗಳೂರು: ಮಾನ್ಯ ಬಸವರಾಜ ಬೊಮ್ಮಾಯಿ ಅವರೇ, ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ತೆರಳಿದ್ದೀರಿ ಸಂತೋಷ. ಆ ಭಾಗಕ್ಕೆ ಹಿಂದುಳಿದ ಪ್ರದೇಶವೆಂಬ ಪಟ್ಟದಿಂದ ವಿಮೋಚನೆ ನೀಡುವ ಕೆಲಸಗಳನ್ನು ಮಾಡದಿರುವುದೇಕೆ? ಅನುದಾನದಲ್ಲಿ, ಉದ್ಯೋಗದಲ್ಲಿ ನಿರಂತರ ಅನ್ಯಾಯ ಎಸಗುತ್ತಿರುವುದು ಏಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Advertisement

ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ. ಅದು ಮತದಾರರಾದರೂ ಸರಿ, ಶಾಸಕರಾದರೂ ಸರಿ. ಆಪರೇಷನ್‌ ಕಮಲಕ್ಕೆ ನೀಡಿದ ಆಸೆ, ಆಮಿಷಗಳನ್ನು ಆಪರೇಷನ್‌ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ. ಆಪರೇಷನ್‌ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ ಬಿಜೆಪಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುವುದೇ ಎಂದು ಟ್ವಿಟರ್‌ನಲ್ಲಿ ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ.

2014ರಲ್ಲಿ ನಮ್ಮ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ 4 ವರ್ಷಗಳಲ್ಲಿ 65 ಕೋಟಿ ರೂ. ನೀಡಿ ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಒತ್ತು ನೀಡಿತ್ತು. ಬಿಜೆಪಿ ಸರ್ಕಾರ 3 ವರ್ಷಗಳಲ್ಲಿ ಕೇವಲ 31.5 ಕೋಟಿ ರೂ. ಖರ್ಚು ಮಾಡಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಫಾರ್‌ ಕರ್ನಾಟಕಕ್ಕೆ ಸಮುದಾಯಗಳ ಅಭಿವೃದ್ಧಿ ಬೇಕಿಲ್ಲ ಎಂಬುದು ಸತ್ಯ.

ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ ಎಂದು ಆ ಭಾಗದ ಸ್ವತಃ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತ ಪಡಿಸಿದ್ದರು. ಜನರ ಮಾತಲ್ಲ, ಕನಿಷ್ಠ ಅವರದೇ ಪಕ್ಷದ ಶಾಸಕರ ಮಾತನ್ನೂ ಕಲ್ಯಾಣ ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೀವು ಯಾವ ಮುಖ ಇಟ್ಟುಕೊಂಡು ಕಲ್ಯಾಣ ಕರ್ನಾಟಕಕ್ಕೇ ಭೇಟಿ ನೀಡಿದ್ದೀರಿ ಎಂದು ಕುಟುಕಿದೆ.

Advertisement

Udayavani is now on Telegram. Click here to join our channel and stay updated with the latest news.

Next