Advertisement

ಸಿಎಂ ಮಲತಾಯಿ ಧೋರಣೆ: ಬಿಎಸ್‌ವೈ

06:00 AM Dec 08, 2018 | |

ಬೆಂಗಳೂರು : ರೈತರ ಸಾಲಮನ್ನಾ ಸರಿಯಾಗಿ ಮಾಡದೆ, ಆತ್ಮಹತ್ಯೆ ತಡೆಯಲು ವಿಫ‌ಲವಾಗಿರುವ ರಾಜ್ಯದ ಮುಖ್ಯಮಂತ್ರಿಗಳು ನಾಟಿ ಮಾಡಿದ ಭತ್ತದ ಕೊಯ್ಲು ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

Advertisement

ಮಂಡ್ಯಜಿಲ್ಲೆಯ ಸೀತಾಪುರದಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಭತ್ತದ ಕೊಯ್ಲು ಮಾಡಿದ್ದನ್ನು ಟೀಕಿಸಿರುವ ಯಡಿಯೂರಪ್ಪ ಅವರು, ಮುಖ್ಯಮಂತ್ರಿಗಳೇ, ನೀವು ಭತ್ತ ನಾಟಿ ಮಾಡಿದಾಗ ರೈತರು ಮತ್ತು ನಾಡಿನ ಜನರು ಸಂಭ್ರಮಿಸಿದ್ದರು. ರೈತ ಮುಖ್ಯಮಂತ್ರಿ ಎಂದು ಕೊಂಡಾಡಿದ್ದರು. ನಾಟಿ ಮಾಡಿದ ಭತ್ತದ ಕೊಯ್ಲು ಮಾಡುತ್ತಿರುವುದೂ ಸಂತಸದ ವಿಷಯ. ಆದರೆ, ನೀವು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಮೂಡಿಸಿದೆ ಎಂದರು.

ಉತ್ತರ ಕರ್ನಾಟಕದ ಬಹಳಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ. ಜನರಿಗೆ ಕುಡಿಯಲು ನೀರಿಲ್ಲ.  ಮುಖ್ಯಮಂತ್ರಿ ಸಹಿತವಾಗಿ ಸಚಿವರ್ಯಾರೂ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಜನರ ಸಂಕಷ್ಟ ಅರಿಯಲು ಪ್ರಯತ್ನಿಸುತ್ತಿಲ್ಲ ಎಂದು ದೂರಿದರು.

ಭತ್ತದ ನಾಟಿ ಮಾಡಿ ಅದರ ಕೊಯ್ಲಿಗೆ ಬಂದಿದ್ದು ನೋಡಿದರೆ ಉತ್ತರ ಕರ್ನಾಟಕದ ಬಗ್ಗೆ ನೀವು ಅಸಡ್ಡೆ ಹಾಗೂ ಮಲತಾಯಿ ಧೋರಣೆ ಹೊಂದಿರುವುದು ಸ್ಪಷ್ಟವಾಗುತ್ತಿದೆ. ಒಬ್ಬ ವ್ಯಕ್ತಿ ಒಂದು ಸಲ ತಮ್ಮ ನಿಲುವು ಮತ್ತು ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಎಂದಾದ ಮೇಲೆ ನಿಮ್ಮ ಉತ್ತರ ಕರ್ನಾಟಕದ ವಿರೋಧಿ ನಿಲುವಿನ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ರಾಜ್ಯದ ಮುಖ್ಯಮಂತ್ರಿ ತಾಯಿಯ ಸ್ಥಾನದಲ್ಲಿ ಇರಬೇಕೇ ವಿನಃ ಮಲತಾಯಿ ಸ್ಥಾನದಲ್ಲಿ ಅಲ್ಲ ಎಂದು ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್‌!
ರಾಜ್ಯ ರಾಜಕೀಯದಲ್ಲಿ ಇದು ವಾಡಿಕೆ ಆಗಿದೆ. ನಿಮ್ಮ ಅಥವಾ ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ, ನನ್ನ ಕಡೆ ಬೊಟ್ಟು ಮಾಡಿ ತೋರಿಸುವುದು ಸಾಮಾನ್ಯವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

Advertisement

35 ಸಾವಿರ ಕೋಟಿಗಳಿಗೆ ಲೆಕ್ಕಪತ್ರವಿಲ್ಲ ಎಂದು ಸಿಎಜಿ ಎತ್ತಿ ತೋರಿಸಿದೆ. ಇದನ್ನು ಪ್ರಶ್ನಿಸಿದರೆ, ಮಾಜಿ ಮುಖ್ಯಮಂತ್ರಿಗಳು “ನಾವೇನು ಜೈಲಿಗೆ ಹೋಗಿಲ್ಲ ಎಂದು ಉತ್ತರ ಕೊಡುತ್ತಾರೆ. ಕಾನೂನು ಓದಿದವರೇ ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ, ಇನ್ನು ಸಾಮಾನ್ಯ ಅಪರಾಧಿ ಏನು ಹೇಳುತ್ತಾನೆ? ಅವನು ಈ ನೆಲದ ಕಾನೂನಿಗೆ ಏಕೆ ಗೌರವ ಕೊಡುತ್ತಾನೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next