Advertisement
ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಕೆಮರಾಗಳತ್ತ ತಿರುಗಿಯೂ ನೋಡದೆ ಹೊರಟ ಮುಖ್ಯಮಂತ್ರಿ ಮೂಳೂರಿನಿಂದ ಶೃಂಗೇರಿಗೆ ಪ್ರಯಾಣ ಬೆಳೆಸಿದರು. ನಿರ್ಗಮನದ ಸಂದರ್ಭದಲ್ಲೂ ರೆಸಾರ್ಟ್ ಸುತ್ತಮುತ್ತ ಮತ್ತು ಮಾರ್ಗದುದ್ದಕ್ಕೂ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ 40 ಜನರ ತಂಡ ಪಂಚಕರ್ಮ ಚಿಕಿತ್ಸೆಯನ್ನು ನೀಡಿದೆ. 40 ಜನರ ತಂಡದಲ್ಲಿ ನಾಲ್ವರು ತಜ್ಞ ವೈದ್ಯರು, 20 ಮಂದಿ ತಂತ್ರಜ್ಞರು ಮತ್ತು 16 ಮಂದಿ ಸಿಬಂದಿಯಿದ್ದರು. ಸಿಎಂ ಮತ್ತು ಮಾಜಿ ಪಿಎಂಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಸಾಥ್ ನೀಡಿದ್ದು, ಶುಕ್ರವಾರ ನಿರ್ಗಮನದ ವೇಳೆ ಜೆಡಿಎಸ್ ಮುಖಂಡ ಶಿವರಾಮೇಗೌಡ ಜತೆಗಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ನೇತೃತ್ವದಲ್ಲಿ ಕಾರ್ಯಧ್ಯಕ್ಷ ವಾಸುದೇವ ರಾವ್, ಕಾರ್ಯದರ್ಶಿ ಜಯರಾಮ ಆಚಾರ್ಯ, ಸುಧಾಕರ ಶೆಟ್ಟಿ ಹೆಜಮಾಡಿ ಬೀಳ್ಕೊಟ್ಟರು.
Related Articles
Advertisement