Advertisement

ಕೋಮು ವಿದ್ವೇಷ: ಸುದರ್ಶನ್‌ ನ್ಯೂಸ್‌ ಚ್ಯಾನಲ್‌ ಮುಖ್ಯಸ್ಥ ಅರೆಸ್ಟ್‌

12:22 PM Apr 13, 2017 | Team Udayavani |

ಲಕ್ನೋ : ಸಂಭಾಲ್‌ನ ವಿವಿಧ ಸಮುದಾಯಗಳಲ್ಲಿ ದ್ವೇಷ-ವೈಷಮ್ಯ ಬಡಿದೆಬ್ಬಿಸಿ ಕೋಮು ಗಲಭೆಗೆ ಕಾರಣವಾಗುವಂತಹ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತಿರುವ ಆರೋಪದ ಮೇಲೆ ಟಿವಿ ವಾಹಿನಿಯೊಂದರ ಪ್ರಧಾನ ಸಂಪಾದಕ ಮತ್ತು ಮುಖ್ಯ ಆಡಳಿತ ನಿರ್ದೇಶಕ ಸುರೇಶ್‌ ಛವಹಂಕೆ ಎಂಬವರನ್ನು ಸಂಭಾಲ್‌ ಪೊಲೀಸರು ಬುಧವಾರ ತಡ ರಾತ್ರಿ ಬಂಧಿಸಿದ್ದಾರೆ. 

Advertisement

ಛವಹಂಕೆ, ನಗರದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ಅವರನ್ನು ಚೌಧರಿ ಚರಣ್‌ ಸಿಂಗ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸುದರ್ಶನ್‌ ನ್ಯೂಸ್‌ ಚ್ಯಾನಲ್‌ ಅದರ ಮುಖ್ಯಸ್ಥರಾಗಿರುವ ಛವಹಂಕೆ ಅವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next