Advertisement

ಲಾಕ್‌ಡೌನ್‌ ವಿಸ್ತರಣೆಗೆ ಯಡಿಯೂರಪ್ಪ ಸ್ವಾಗತ ; ಕೇಂದ್ರದ ಮಾರ್ಗಸೂಚಿ ಬಳಿಕ ಕ್ರಮ

01:04 AM Apr 15, 2020 | Hari Prasad |

ಬೆಂಗಳೂರು: ಲಾಕ್‌ ಡೌನನ್ನು ಮೇ 3ರವರೆಗೆ ವಿಸ್ತರಣೆ ಮಾಡಿರುವ ಪ್ರಧಾನಿ ಮೋದಿ ಅವರ ತೀರ್ಮಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಪ್ರಧಾನಿ ನೀಡಿರುವ ಎಲ್ಲಾ ಏಳು ಸಲಹೆಗಳ ಜತೆಗೆ ಅವರ ಸೂಚನೆಗಳನ್ನು ರಾಜ್ಯ ಸರಕಾರ ಪಾಲನೆ ಮಾಡಲಿದೆ ಎಂದೂ ಸಿಎಂ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಭಾಷಣದ ಅನಂತರ ಪತ್ರಿಕಾಗೋಷ್ಠಿ ನಡೆಸಿದ ಬಿಎಸ್‌ವೈ, ಲಾಕ್‌ಡೌನ್‌ ಸಂಬಂಧ ಕೇಂದ್ರ ಸರಕಾರದ ಮಾರ್ಗಸೂಚಿಗಾಗಿ ಕಾಯುತ್ತೇವೆ. ಅನಂತರ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಲಾಕ್‌ಡೌನ್‌ ವಿಸ್ತರಣೆಗೆ ರಾಜ್ಯದ ಜನತೆ ಸಹಕರಿಸಬೇಕು. ಕೃಷಿ ಚಟುವಟಿಕೆ, ಹಣ್ಣು-ತರಕಾರಿ ಸಾಗಾಟ, ಮಾರಾಟ, ಅಗತ್ಯ ವಸ್ತುಗಳ ಸೇವೆ ಇರಲಿದೆ. ಲಾಕ್‌ಡೌನ್‌ ಉಲ್ಲಂಘಿಸಿದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಒಂದು ವಾರ ಕಾಲ ಲಾಕ್‌ಡೌನ್‌ ಕಠಿನವಾಗಿರಲಿದೆ. ಎ.20ರ ಅನಂತರ ಕೇಂದ್ರದ ಮಾರ್ಗಸೂಚಿ ಅನ್ವಯ ವಿನಾಯಿತಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಪ್ರಧಾನಿ ಹೇಳಿದಂತೆ ದೇಶ ಮತ್ತು ನಮ್ಮ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಕಳೆದ ಎರಡು ತಿಂಗಳಲ್ಲಿ ಹೆಚ್ಚಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕ್ರಮಕೈಗೊಳ್ಳಲಾಗುವುದು. ವಲಸೆ ಕಾರ್ಮಿಕರು ಎಲ್ಲಿದ್ದೀರೋ ಅಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಸಿಎಂ ಮನವಿ ಮಾಡಿದರು.

ಎಂಎಸ್‌ಐಎಲ್‌ ಮತ್ತು ಎಂಆರ್‌ಪಿ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಸಂಬಂಧ ಎ.20ರ ಅನಂತರದ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next