Advertisement

ಕೋವಿಡ್ – 19 ಸಂಚಾರಿ ಫೀವರ್ ಕ್ಲಿನಿಕ್‍ಗೆ ಸಿಎಂ ಯಡಿಯೂರಪ್ಪರಿಂದ ಚಾಲನೆ

03:56 PM May 11, 2020 | keerthan |

ಬೆಂಗಳೂರು: ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಗೃಹ ಕಛೇರಿ ಕೃಷ್ಣಾದಲ್ಲಿ ಇಂದು ಕೋವಿಡ್ – 19 ಸಂಚಾರಿ ಫೀವರ್ ಕ್ಲಿನಿಕ್‍ಗೆ ಚಾಲನೆ ನೀಡಿದರು.

Advertisement

19 ಸಂಚಾರಿ ಫೀವರ್ ಕ್ಲಿನಿಕ್‍ಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಮೊಬೈಲ್ ಫೀವರ್ ಕ್ಲಿನಿಕ್ ಅನ್ನು ನಾಲ್ಕು ವಿಭಾಗಗಳಲ್ಲಿ ತೆರೆಯಲಾಗಿದೆ. ಮೈಸೂರು, ಮಂಡ್ಯ, ರಾಯಚೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆಯಲ್ಲೂ ಮೊಬೈಲ್ ಫೀವರ್ ಕ್ಲಿನಿಕ್ ಇದೆ. ಬೆಂಗಳೂರಿನಲ್ಲಿ ನಾಲ್ಕು ಬಸ್ ವ್ಯವಸ್ಥೆ ಮಾಡಲಾಗಿದೆ. ರೋಗ ಲಕ್ಷಣಗಳು ಇರುವವರು ಬಂದು ಈ ಬಸ್ ನಲ್ಲಿ ತಪಾಸಣೆ ನಡೆಸಿಕೊಳ್ಳಬಹುದು. ಬೆಂಗಳೂರು ನಗರದ್ಯಾಂತ ಈ ಬಸ್ ಗಳು ಸಂಚಾರ ನಡೆಸಲಿವೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್,  ಸಂಸದ ತೇಜಸ್ವಿ ಸೂರ್ಯ, ಹೌಸ್ ಜಾಯ್ ಸಂಸ್ಥೆಯ ಸಂಚಿತ್ ಗೌರವ್ ಮತ್ತು ಎಸ್.ಆರ್.ಎಲ್ ಡೈಗನೊಸ್ಟಿಕ್ಸ್ ನ ಮೊಹಮದ್ ನಿಯಮತುಲ್ಲಾ, ಡಾ. ಕುನಾಲ್ ಶರ್ಮಾ, ಹಾಗೂ ಎಸಿಟಿ ಕೋವಿಡ್ ಫಂಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next