Advertisement

ರಬಕವಿ-ಬನಹಟ್ಟಿ: ಮನೆ ದೇವರ ದರ್ಶನ ಪಡೆದ ಬಸವರಾಜ ಬೊಮ್ಮಾಯಿ

01:22 PM Feb 26, 2023 | Team Udayavani |

ರಬಕವಿ-ಬನಹಟ್ಟಿ: ಇಂಚಗೇರಿ ಸಂಪ್ರದಾಯ ಅಪರೂಪವಾಗಿದೆ. ಹುಬ್ಬಳ್ಳಿ ಮಹಾದೇವಪ್ಪನವರ ಒಡನಾಟ, ಇಂಚಗೇರಿ ಸಂಪ್ರದಾಯ ನಮ್ಮ ಮನೆತನಕ್ಕೂ ಸಂಬಂಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಸಂಗಮೇಶ್ವರ ಮಹಾರಾಜರ ಸನ್ನಿದಿಗೆ ದರ್ಶನ ಪಡೆದು ಮಹಾದೇವರನ್ನು ನಾನು ಕೂಡ ನೋಡಿದ್ದೇನೆ. ಅವರ ಶಕ್ತಿ ಹಾಗೂ ಇಂಚಗೇರಿ ಸಂಪ್ರದಾಯವನ್ನು ದೇಶದೆಲ್ಲೆಡೆ ಪಸರಿಸಲು ಶ್ರಮ ದೊಡ್ಡದು. ದೀನ ದಲಿತರಿಗೆ, ಧ್ವನಿಯಿಲ್ಲದವರಿಗೆ ನ್ಯಾಯ ಒದಗಿಸುವ ಕಾರ್ಯದೊಂದಿಗೆ ಇಂಚಗೇರಿಯ ಮೂಲ ತತ್ವದಡಿಯಲ್ಲಿಯೇ ನಮ್ಮ ಸರ್ಕಾರವೂ ಕೂಡ ಮುನ್ನಡೆಯುತ್ತಿದೆ ಎಂದರು.

ಇಲ್ಲಿ ಬಂದ ಮೇಲೆ ನನ್ನ ಆತ್ಮವಿಶ್ವಾಸ, ಬಲ ಇಮ್ಮಡಿಗೊಂಡಿದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ನಿಶ್ಚಿತವಾಗಿ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next