Advertisement

ಪತ್ರಕರ್ತ ರಾಜಶೇಖರ ಕೋಟಿ ಕುಟುಂಬಕ್ಕೆ ಸಿಎಂ ಸಾಂತ್ವನ

12:17 PM Nov 25, 2017 | Team Udayavani |

ಮೈಸೂರು: ಗುರುವಾರ ನಿಧನರಾದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

ನಗರದ ರಾಮಾನುಜ ರಸ್ತೆಯ ರಾಜಶೇಖರಕೋಟಿ ಅವರ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ 11ರ ವೇಳೆ ಆಗಮಿಸಿದ ಸಿದ್ದರಾಮಯ್ಯ, ಮೃತ ರಾಜಶೇಖರ ಕೋಟಿ ಅವರ ಪತ್ನಿ ನಿರ್ಮಲಕೋಟಿ, ಪುತ್ರಿಯರಾದ ರಶ್ಮಿಕೋಟಿ, ರಮ್ಯಕೋಟಿ ಹಾಗೂ ಪತ್ರ ರವಿಕೋಟಿ ಅವರ ಜತೆಗೆ ಅಂದಾಜು 20 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿ, ಧೈರ್ಯ ತುಂಬಿದರು. ಅಲ್ಲದೆ ಮುಂದಿನ ದಿನಗಳಲ್ಲೂ ಕೋಟಿ ಅವರ ತತ್ವ-ಸಿದ್ಧಾಂತಗಳೊಂದಿಗೆ ಪತ್ರಿಕೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪೂರ್ಣ ಜಾತ್ಯತೀತ ಆಲೋಚನೆಗಳನ್ನು ಹೊಂದಿದ್ದ ರಾಜಶೇಖರ ಕೋಟಿ ಅವರು ಆರಂಭದಿಂದಲೂ ಅತ್ಯಂತ ಶ್ರಮದಿಂದ ಪತ್ರಿಕೆ ಬೆಳೆಸಿದ್ದಾರೆ. ಅಲ್ಲದೆ ಸಾಕಷ್ಟು ಜನಪರ ಹೋರಾಟಗಳನ್ನು ಹುಟ್ಟುಹಾಕಿದ ಕೀರ್ತಿ ಕೋಟಿ ಅವರಿಗೆ ಸೇರಲಿದ್ದು, ನಗರದ ಎನ್‌ಟಿಎಂಎಸ್‌ ಕನ್ನಡ ಶಾಲೆ ಉಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟದ ವೇಳೆ ಹಲವು ಬಾರಿ ನನ್ನೊಂದಿಗೆ ಮಾತನಾಡಿದ್ದರು ಎಂದು ನೆನಪು ಮಾಡಿಕೊಂಡರು. 

 ಸಂಸದ ಆರ್‌.ಧ್ರುವನಾರಾಯಣ್‌, ಶಾಸಕ ಎಂ.ಕೆ.ಸೋಮಶೇಖರ್‌, ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಸಿಎಂ ಆಪ್ತ ಕಾರ್ಯದರ್ಶಿ ಎಂ.ರಾಮಯ್ಯ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ, ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್‌, ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next