Advertisement

Shivaram Hebbar: ಸಿಎಂ ಹೆಬ್ಬಾರ್ ಭೇಟಿ… ಕೇವಲ ಮನವಿಗೆ ಸೀಮಿತವಾಯ್ತಾ ಭೇಟಿ?

12:31 PM Aug 26, 2023 | Team Udayavani |

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ರಾತ್ರಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಸಲ್ಲಿಸಿದರು. ಆದರೆ, ಈ ವೇಳೆ ಹೂ ಗುಚ್ಚ ಕೊಡುವಾಗ ಇದ್ದ ಮಂದಸ್ಮಿತ ನಗು ಅನೇಕ ಸಂಗತಿಗಳಿಗೂ ಜೊತೆಯಾಗುವಂತೆ ಆಗಿದೆ!

Advertisement

ಈಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಘರ್ ವಾಪಸಿ ಆಗುತ್ತಾರೆ ಎಂಬ ವದಂತಿಗಳು ಇದ್ದವು. ಈ ಪರ ವಿರೋಧದ ಚರ್ಚೆ ನಡುವೆ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿನ ಬರ ಸಮಸ್ಯೆ ಇಟ್ಟುಕೊಂಡು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅವರ ಭೇಟಿ ಮನವಿಗೆ ಅಷ್ಟೇ ಸೀಮಿತವಾಗಿದೆಯೇ ಎಂಬ ಚರ್ಚೆಗಳೂ ಇಲ್ಲಿ ಕೇಳಿಬರುತ್ತಿವೆ.

ಇಷ್ಟಕ್ಕೂ ಮನವಿಯಲ್ಲಿ ಯಲ್ಲಾಪುರ, ಮುಂಡಗೋಡ ತಾಲೂಕು, ಬನವಾಸಿ ಹೋಬಳಿಯಲ್ಲಿ ವಾಡಿಕೆಗಿಂತ ಶೇ.೭೦ ಪ್ರತಿಶತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಕುಡಿಯುವ ನೀರು ಪೂರೈಕೆಗೆ ವಿಶೇಷ ಅನುದಾನವನ್ನು ಮಂಜೂರಿಸುವಂತೆ ಮನವಿ ನೀಡಿದ್ದಾರೆ.

ಇದನ್ನೂ ಓದಿ: Bengaluru:ವಿಮಾನ ನಿಲ್ದಾಣದಲ್ಲಿ CM ಪ್ರಧಾನಿಯನ್ನು ಸ್ವಾಗತಿಸಿಲ್ಲವೇಕೆ…ಮೋದಿ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next