ಕಾರವಾರ (ಬನವಾಸಿ) : ಯುವ ಪೀಳಿಗೆಗೆ ನಮ್ಮ ಇತಿಹಾಸ ಸಂಸ್ಕೃತಿ ಕಲೆ ಭಾಷೆ ಬಗ್ಗೆ ತಿಳಿಸಲು ಕದಂಬ ಉತ್ಸವದಂತಹ ಉತ್ಸವ ಗಳು ಸಹಕಾರಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಜಿಲ್ಲಾಡಳಿತ ಉತ್ತರಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃಧ್ದಿ ಪ್ರಾಧಿಕಾರ ವತಿಯಿಂದ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ನಡೆದ ಕದಂಬೋತ್ಸವ 2024 ನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ತಿಳಿಯದವರು ಭವಿಸ್ಯ ನಿರ್ಮಿಸಲು ಸಾಧ್ಯವಿಲ್ಲ ವೆಂದು ಅಂಬೇಡ್ಕರ್ ತಿಳಿಸಿದ್ದಾರೆ. ಅದರಂತೆ ಇತಿಹಾಸ ವನ್ನು ತಿಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಹಲವು ಉತ್ಸವ ಆಯೋಜಿಸಲಾಗುತ್ತಿದೆ ಎಂದರು.
ಮನುಷ್ಯ ಮನುಷ್ಯರ ನಡುವೆ ದ್ವೇಷ ಇರಬಾರದು ಪ್ರೀತಿ ಇರಬೇಕು ಅದೇ ನಿಜವಾದ ಮನುಷ್ಯತ್ವ. ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಮಾತಿನಂತೆ ಸಮಾಜದಲ್ಲಿ ಎಲ್ಲಾರು ಪ್ರೀತಿಯಿಂದ ಬದುಕಬೇಕು ಎಂದರು.
ಬಸವಾದಿ ಶರಣರು, ಬುದ್ಧ, ಗಾಂಧಿ, ಅಂಬೇಡ್ಕರ್ ಅವರ ಸಂದೇಶಗಳೇ ನಮ್ಮ ಸರ್ಕಾರಕ್ಕೆ ಪ್ರೇರಣೆ. ಕೆಲವು ಪಟ್ಟ ಹಿತಾಸಕ್ತಿಗಳು ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಅಂತಹವರ ಬಗ್ಗೆ ಜನತೆ ಎಚ್ಚರದಿಂದಿರಬೇಕು ಎಂದರು.
ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ ಸಮಾನತೆ, ಬ್ರಾತೃತ್ವದಿಂದ ಕೂಡಿದ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ 1.20 ಕೋಟಿ ಕುಟುಂಬ ಗಳಿಗೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂ ಗಳ ನೆರವು ನೀಡಲಾಗುತ್ತಿದೆ ಎಂದರು.