Advertisement

ಸಿಎಂ ಸಿದ್ಧರಾಮಯ್ಯ ಧರ್ಮವಿರೋಧಿ: ತೇಜಸ್ವಿನಿ

02:34 PM Oct 25, 2017 | Team Udayavani |

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಪರಂಪರೆ ಆಚರಣೆ ಧರ್ಮ ವಿರೋಧಿಯಾಗಿದ್ದಾರೆ. ಹೀಗಾಗಿ ಮಾಂಸ ಸೇವಿಸಿ ದೇವಾಲಯ ಪ್ರವೇಶಿಸಿದ್ದಾರೆ. ನಾಸ್ತಿಕರಾದ ಇವರಿಂದ ನಾವು ಬೇರೇನು ನಿರೀಕ್ಷಿಸಲು ಸಾಧ್ಯ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್‌ ವ್ಯಂಗ್ಯವಾಡಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲಿನಿಂದಲೂ ಧರ್ಮದ ವಿರೋಧಿಯಾಗಿದ್ದಾರೆ. ಸದಾಕಾಲ ಹಿಂದೂಗಳು, ಹಿಂದು ದೇವತೆಗಳನ್ನು ಟೀಕಿಸುವ ಭಗವಾನ್‌ ಅಂತಹವರನ್ನು ಅನುಸರಿಸುವ ಸಿದ್ದರಾಮಯ್ಯ ಅವರಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ ಎಂದರು. ಸಿದ್ದರಾಮಯ್ಯ ಮಾಂಸವನ್ನು ಸೇವಿಸಿಯಾದರೂ ದೇವಾಲಯಕ್ಕೆ ಹೋಗಲಿ, ಅಥವಾ ಮಾಂಸವನ್ನು ಕೊರಳಿಗೆ ಹಾಕಿಕೊಂಡಾದರೂ ಹೋಗಲಿ ಅದರಿಂದ ತಮಗಾಗಲಿ, ದೇವರಿಗಾಗಲಿ ಆಗಬೇಕಾದುದು ಏನೂ ಇಲ್ಲ. ರಾಜ್ಯದ ಜನತೆಯೇ ಇದಕ್ಕೆ ಉತ್ತರಿಸುತ್ತಾರೆ ಎಂದು ಹೇಳಿದರು.

ಅಪವಿತ್ರ ಮೈತ್ರಿ: ರಾಮನಗರದಲ್ಲಿ ಸದಾಕಾಲ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಳ್ಳುತ್ತದೆ. ಡಿ.ಕೆ.
ಶಿವಕುಮಾರ್‌ ಹಾಗೂ ಎಚ್‌.ಡಿ. ದೇವೇಗೌಡರ ಕುಟುಂಬದವರು ಚುನಾವಣೆಯಲ್ಲಿ ಕಣಕ್ಕಿಳಿದ ಕೂಡಲೆ ಮೈತ್ರಿ ಆರಂಭವಾಗುತ್ತದೆ. ಈ ಎರಡು ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆಯವರು ಚುನಾವಣೆಯಲ್ಲಿ ಗೆಲ್ಲಬಾರದು ಎಂಬುದಷ್ಟೇ ಇವರ ಧ್ಯೇಯವಾಗಿದೆ ಎಂದರು. ಮಾಜಿ ಸಚಿವ ಸಿ.ಪಿ. ಯೋಗೀಶ್ವರ್‌ ಬಿಜೆಪಿ ಸೇರುವ ವಿಷಯವಾಗಿ ಮಾತನಾಡಿದ ಅವರು, ಸಿ.ಪಿ.ಯೋಗೀಶ್ವರ್‌ ಕಾಂಗ್ರೆಸ್‌ನಲ್ಲಿದ್ದಾಗ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಅವರು ಬಿಜೆಪಿ ಸೇರಿದ ನಂತರ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಅವರ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿದ್ದರಿಂದ ಅವರು ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಆ ನಂತರ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಅನುಸರಿಸಿ ಕಾಂಗ್ರೆಸ್‌ ಪಕ್ಷಕ್ಕೆ ಹೋದರು. ಈಗ ಪುನಃ ಬುದ್ಧಿ
ಕಲಿತು ಕಾಂಗ್ರೆಸ್‌ ಬಿಟ್ಟಿದ್ದಾರೆ ಎಂದರು. 

ಡಿ.ಕೆ. ಶಿವಕುಮಾರ್‌ ವಿರುದ್ಧ ತಮಗೆ ವೈಯಕ್ತಿಕವಾಗಿ ಏನೂ ಆಗಬೇಕಾದುದಿಲ್ಲ. ಅವರೇ ಹೇಳಿಕೊಂಡಿರುವಂತೆ ಅವರು ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ದಿಢೀರನೆ ಅವರು ಇಷ್ಟೊಂದು ಆಸ್ತಿ ಹೇಗೆ ಮಾಡಿಕೊಂಡರು ಎಂಬ ಬಗ್ಗೆ ಅವರೇ ಉತ್ತರಿಸಬೇಕು. ಯಾವ ರೀತಿ ಜಾದು ಮಾಡಿ ಹಣ ಸಂಪಾದನೆ ಮಾಡಿದರು ಎಂಬುದನ್ನು ಅವರ ಕ್ಷೇತ್ರದ ಜನತೆಗೆ ತಿಳಿಸಿದರೆ ಅವರೂ ಉದ್ಧಾರವಾಗುತ್ತಾರೆ ಎಂದು ವ್ಯಂಗ್ಯವಾಡಿದರು. ನಂಜುಂಡಪ್ಪ ವರದಿಯನ್ವಯ ರಾಜ್ಯದಲ್ಲಿ ಅತೀ ಹೆಚ್ಚು ಹಿಂದುಳಿದಿರುವ ತಾಲೂಕುಗಳಲ್ಲಿ ಡಿ.ಕೆ. ಶಿವಕುಮಾರ್‌ ಮೊದಲಿನಿಂದಲೂ ಪ್ರತಿನಿಧಿಸುತ್ತಿರುವ ಕನಕಪುರ ಕ್ಷೇತ್ರವೂ ಸೇರಿದೆ. ಇದು ಶಿವಕುಮಾರ್‌ ಅವರ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. ಕನಕಪುರದಲ್ಲಿ ದೀನದಲಿತರ, ಆದಿವಾಸಿಗಳ ಪರಿಸ್ಥಿತಿ ಹೇಳತೀರದಾಗಿದೆ. ಗ್ರಾನೈಟ್‌ ಲೂಟಿಯಾಗಿದೆ. ಜನರಿಗೆ ಅನ್ಯಾಯ ಮಾಡಿದರೆ ಬಹಳ ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂಬುದನ್ನು ಮನಗಾಣುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ಸೈನ್ಯಕ್ಕೆ ಕೊಡವರ ಕೊಡುಗೆ ಅಪಾರವಾಗಿದೆ. ಅಂತಹ ಕೊಡವರನ್ನು ಟಿಪ್ಪು ಹತ್ಯೆಗೈಯ್ದಿದ್ದನು. ಅಷ್ಟು ಮಾತ್ರವಲ್ಲದೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ನರನ್ನು
ಅಟ್ಟಾಡಿಸಿ ಕೊಂದಿದ್ದನು. ಕಾಂಗ್ರೆಸ್‌ ತಾವು ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುತ್ತದೆ. ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರು ಎಂಬುದನ್ನು ಅವರು ಮರೆತಿದ್ದಾರೆಯೆ ಎಂದು ಪ್ರಶ್ನಿಸಿದರು. 

Advertisement

ನಂಜುಂಡಪ್ಪ ವರದಿಯನ್ವಯ ರಾಜ್ಯದಲ್ಲಿ ಅತೀ ಹೆಚ್ಚು ಹಿಂದುಳಿದಿರುವ ತಾಲೂಕುಗಳಲ್ಲಿ ಡಿ.ಕೆ. ಶಿವಕುಮಾರ್‌
ಮೊದಲಿನಿಂದಲೂ ಪ್ರತಿನಿಧಿಸುತ್ತಿರುವ ಕನಕಪುರ ಕ್ಷೇತ್ರವೂ ಸೇರಿದೆ. ಇದು ಶಿವಕುಮಾರ್‌ ಅವರ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. ಕನಕಪುರದಲ್ಲಿ ದೀನದಲಿತರ, ಆದಿವಾಸಿಗಳ ಪರಿಸ್ಥಿತಿ ಹೇಳತೀರದಾಗಿದೆ. ಗ್ರಾನೈಟ್‌ ಲೂಟಿಯಾಗಿದೆ. ಜನರಿಗೆ ಅನ್ಯಾಯ ಮಾಡಿದರೆ ಬಹಳ ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. 

ತೇಜಸ್ವಿನಿ

Advertisement

Udayavani is now on Telegram. Click here to join our channel and stay updated with the latest news.

Next