Advertisement

CM Whatsapp Channel: ಸಿಎಂ ವಾಟ್ಸ್‌ಆ್ಯಪ್‌ ಚಾನೆಲ್‌ಗೆ ನಿರೀಕ್ಷೆ ಮೀರಿ ಸ್ಪಂದನೆ

10:10 AM Sep 20, 2023 | Team Udayavani |

ಬೆಂಗಳೂರು: ಸರ್ಕಾರ ಆರಂಭಿಸಿದ ಮೊಟ್ಟಮೊದಲ ವಾಟ್ಸ್‌ ಆ್ಯಪ್‌ ಚಾನೆಲ್‌ಗೆ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು, ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಜನ ಚಂದಾದಾರರಾಗಿದ್ದಾರೆ.

Advertisement

ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು Chief Minister of Karnataka ಎಂಬ ಹೆಸರಿನ ಚಾನೆಲ್‌ ಕಾರ್ಯಾರಂಭ ಮಾಡಿದೆ.

ಕಳೆದವಾರವಷ್ಟೇ ಅಂದರೆ ಸೆ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಾನೆಲ್‌ಗೆ ಚಾಲನೆ ನೀಡಿದ್ದರು. ಇದಕ್ಕೆ ಈಗಾಗಲೇ 50 ಸಾವಿರಕ್ಕೂ ಅಧಿಕ ಚಂದಾದಾರ (Subscribers)) ಆಗಿದ್ದಾರೆ.

ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸ್‌ಆ್ಯಪ್‌ ಚಾನಲ್‌ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ನೀವು ಕೂಡ ವಾಟ್ಸ್‌ಆ್ಯಪ್‌ನ ಚಾನೆಲ್‌ ಸೆಕ್ಷನ್‌ನಲ್ಲಿ Chief Minister of Karnataka ಎಂದು ಸರ್ಚ್‌ ಮಾಡಿ ಚಂದಾದಾರರಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next