ಮಂಗಳೂರು: ನಮ್ಮ ಸರಕಾರ ಬಂದು ಒಂದು ವರ್ಷವಾಗಿದೆ..ನಾವು ಏನೇನು ಮಾಡಿದ್ದೇವೆ ಅಂತ ಜನರಿಗೆ ತಿಳಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ದ.ಕ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ನಡೆಯಲಿರುವ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನೀರಾವರಿಗೆ 16000 ಕೋಟಿ ರೂ ಇತ್ತು ಈ ವರ್ಷ 18 ಸಾವಿರ ಕೋಟಿ ಇಟ್ಟಿದ್ದೇವೆ. ಏನು ಮಾಡಿಲ್ಲ ಅಂತ ಅಂದ್ರೆ ಏನು ಹೇಳುವುದು? ಗ್ಯಾರೆಂಟಿಯನ್ನು ಸೇರಿಸಿ ಒಂದು ಲಕ್ಷದ 20 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ. ಬಿಜೆಪಿಯವರು ಬಜೆಟ್ ಓದುವುದಿಲ್ಲ ಎಕನಾಮಿಕ್ಸ್ ಗೊತ್ತಾಗುವುದಿಲ್ಲ ಎಂದರು.
ಸುಳ್ಳು ಮಾತ್ರ ಹೇಳುತ್ತಾರೆ, ಅಭಿವೃದ್ಧಿ ಶೂನ್ಯ ಅಭಿವೃದ್ಧಿ ಶೂನ್ಯ ಅಂತಾರೆ. ಬಡವರಿಗೆ ಆರ್ಥಿಕವಾಗಿ ಸಫಲತೆ ಕೊಡುವುದು ಅಭಿವೃದ್ಧಿ ಅಲ್ವಾ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು. ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಅಂಬೇಡ್ಕರ್ ಕೂಡಾ ಹೇಳಿದರ ಎಂದರು.