Advertisement

Tungabhadra Reservoir: ಇನ್ಮುಂದೆ ತಜ್ಞರು ಹೇಳಿದಂತೆ ಜಲಾಶಯ ನಿರ್ವಹಣೆ ಮಾಡುತ್ತೇವೆ- ಸಿಎಂ

03:45 PM Aug 13, 2024 | Team Udayavani |

ಕೊಪ್ಪಳ:  70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಮುರಿದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಗೇಟ್ ಈಗಾಗಲೇ ತಯಾರು ಮಾಡಲಾಗುತ್ತಿದೆ ನಾಳೆಯಿಂದ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ತುಂಗಭದ್ರಾ ಜಲಾಶಯದಲ್ಲಿ ಮಾತನಾಡಿದ ಅವರು,  ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಅವರು ಬಹಳ ಅನುಭವಿ, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಅಳವಡಿಕೆ ನಡೆಯುತ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು  ಇನ್ಮುಂದೆ ತಜ್ಞರು ಹೇಳಿದಂತೆ ಜಲಾಶಯ ನಿರ್ವಹಣೆ ಮಾಡಲಾಗುತ್ತದೆ ಎಂದರು.

ಈ ಹಿಂದೆ ಗೇಟ್ ಮುರಿದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಅವರು,  ಇತಿಹಾಸದಲ್ಲಿ ಈ ಹಿಂದೆ ಯಾವತ್ತೂ ಗೇಟ್ ಮುರಿದಿಲ್ಲ. ಸದ್ಯಕ್ಕೆ ನೀರು ನಿಲ್ಲಿಸುವುದೇ ನಮಗೆ ಸವಾಲು ಎಂದರು.

ಗೇಟ್  ಕೊಚ್ಚಿ ಹೋಗಿರುವ ಪ್ರಕರಣಕ್ಕೆ ಯಾರನ್ನು ಹೊಣೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ನೀರು ನಿಲ್ಲಿಸೋದೇ ಒಂದೇ ನಮ್ಮ ಗುರಿ, ಉಳಿದಿದ್ದೆಲ್ಲ ಆ ಮೇಲೆ ಎಂದು ಹೇಳಿದರು.

ಮೊದಲನೇ  ಬೆಳೆಗೆ ಯಾವುದೇ ತೊಂದರೆ ಇಲ್ಲ.  ಗೇಟ್ ಕೂಡಿಸಿದ ಬಳಿಕವೂ ನಮ್ಮ ಬಳಿ 63 ಟಿಎಂಸಿ ನೀರು ಉಳಿಯುತ್ತದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಮೊದಲನೇ ಬೆಳೆಗೆ ಬೇಕಾಗುಷ್ಟು ನೀರು ಇದೆ. ಮೊದಲ ಬೆಳೆಗೆ ಬೇಕಾದಷ್ಟು ನೀರು ಪೂರೈಸುತ್ತೇವೆ.  ಆಂಧ್ರ, ತೆಲಂಗಾಣ ರಾಜ್ಯದ ನಾಯಕರು ನಾವು ಜಂಟಿಯಾಗಿದ್ದೇವೆ.  ಜಲಾಶಯ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

Advertisement

ನಾಲ್ಕೈದು ದಿನಗಳಲ್ಲಿ ಗೇಟ್ ಕೂಡಿಸಲಾಗುತ್ತದೆ. ಮುಂದೆ ಮಳೆಯಾಗೋದಿದೆ, ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಆಗ ಇಲ್ಲಿಗೆ ಬಂದು ಬಾಗಿನ ಅರ್ಪಣೆ ಮಾಡುವೆ ಎಂದು ಸಿಎಂ ಹೇಳಿದರು.

ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ: ಕನ್ನಯ್ಯ ನಾಯ್ಡು

ಕೊಪ್ಪಳ: ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ. 48 ಟನ್  ಭಾರದ ಗೇಟ್ ಒಂದೇ ಬಾರಿ ಇಳಿಸುವುದು ಕಷ್ಟ. ಐವತ್ತು ಟನ್ ಭಾರದ ಐದು ಕಬ್ಬಿಣದ ಗೇಟ್ ಒಂದೊಂದು ಇಳಿಸುತ್ತೇವೆ ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತದೆ ಎಂದು ಹಿರಿಯ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.

ನಾಳೆಯಿಂದ ಒಂದೊಂದೇ ಪೀಸ್ ಗಳನ್ನು ಹಾಕುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯಸ್ಸು 40 ವರ್ಷ ಇರುತ್ತದೆ.  ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ ಕೆಲಸ ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next