Advertisement
ತುಂಗಭದ್ರಾ ಜಲಾಶಯದಲ್ಲಿ ಮಾತನಾಡಿದ ಅವರು, ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಅವರು ಬಹಳ ಅನುಭವಿ, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಅಳವಡಿಕೆ ನಡೆಯುತ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು ಇನ್ಮುಂದೆ ತಜ್ಞರು ಹೇಳಿದಂತೆ ಜಲಾಶಯ ನಿರ್ವಹಣೆ ಮಾಡಲಾಗುತ್ತದೆ ಎಂದರು.
Related Articles
Advertisement
ನಾಲ್ಕೈದು ದಿನಗಳಲ್ಲಿ ಗೇಟ್ ಕೂಡಿಸಲಾಗುತ್ತದೆ. ಮುಂದೆ ಮಳೆಯಾಗೋದಿದೆ, ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಆಗ ಇಲ್ಲಿಗೆ ಬಂದು ಬಾಗಿನ ಅರ್ಪಣೆ ಮಾಡುವೆ ಎಂದು ಸಿಎಂ ಹೇಳಿದರು.
ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ: ಕನ್ನಯ್ಯ ನಾಯ್ಡು
ಕೊಪ್ಪಳ: ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿ ಇಳಿಸುವುದು ಕಷ್ಟ. ಐವತ್ತು ಟನ್ ಭಾರದ ಐದು ಕಬ್ಬಿಣದ ಗೇಟ್ ಒಂದೊಂದು ಇಳಿಸುತ್ತೇವೆ ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತದೆ ಎಂದು ಹಿರಿಯ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ನಾಳೆಯಿಂದ ಒಂದೊಂದೇ ಪೀಸ್ ಗಳನ್ನು ಹಾಕುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯಸ್ಸು 40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ ಕೆಲಸ ನೀರು ಕಡಿಮೆಯಾದ ಮೇಲೆ ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಅವರು ಹೇಳಿದರು.