Advertisement

ರಸ್ತೆ ಗುಂಡಿ ಮುಚ್ಚಲಾಗದ ಸಿಎಂ ಸಿದ್ದರಾಮಯ್ಯ ನಪುಂಸಕ!

03:33 PM Oct 11, 2017 | Team Udayavani |

ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಬಿಜೆಪಿ ನಗರ ಘಟಕ ಬುಧವಾರ ಬೆಳಗ್ಗೆ ಬಿಬಿಎಂಪಿ ಎದುರು ಬೃಹತ್‌ ಪ್ರತಿಭಟನೆ ನಡೆಸಿತು. ಈ ವೇಳೆ ಬಿಬಿಎಂಪಿ ವಿಪಕ್ಷ ನಾಯಕ ಪದ್ಮಭಾಭ ರೆಡ್ಡಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ನಪುಂಸಕ’ ಎಂದು ಲೇವಡಿ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 

Advertisement

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದ ಬಿಜೆಪಿಯ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 

ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಪ್ರತಿಭಟನಾ ಕಾರರು ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್‌ ಮತ್ತು ಬಿಬಿಎಂಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

‘ನಪುಂಸಕ ಎನ್ನುವ ಪದ ಆಕ್ಷೇಪಾರ್ಹ ಪದವಲ್ಲ. ಸಿದ್ದರಾಮಯ್ಯ ಕೆಲಸಕ್ಕೆ ಬಾರದ ವ್ಯಕ್ತಿ’ ಎಂದು ಈ ಹೇಳಿಕೆ ನೀಡಿರುವುದಾಗಿ ರೆಡ್ಡಿ ಸುದ್ದಿಗಾರರಿಗೆ ಹೇಳಿದರು. 

ಪ್ರತಿಭಟನೆ ವೇಳೆ ಕಾರ್ಪೋರೇಷನ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವರಾರು ಪರದಾಡಬೇಕಾಯಿತು. 

Advertisement

15 ದಿನಗಳ ಒಳಗೆ ಗುಂಡಿ ಮುಚ್ಚುತ್ತೇವೆ
ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್‌ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ’15 ದಿನಗಳ ಒಳಗೆ ಎಲ್ಲಾ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತೇವೆ. 3 ತಿಂಗಳ ಒಳಗೆ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡುತ್ತೇವೆ. ರಸ್ತೆಗಳನ್ನು ಹೇಗೆ ಮಾಡುತ್ತೇವೆ ನೋಡಿ’ ಎಂದರು. 

ಇದೇ ವೇಳೆ ‘ಎಲ್ಲಾ ಅಪಘಾತಗಳು ಗುಂಡಿಗಳಿಂಗಾಗಿ ಆಗಿವೆ ಎನ್ನುವುದು ಸರಿಯಲ್ಲ’ ಎಂದರು. 

ಗುಂಡಿಗೆ ಇನ್ನೊಂದು ಬಲಿ 
ಉತ್ತರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ  ಗುಂಡಿ ತಪ್ಪಿಸಲು ಹೋಗಿ ಸ್ಕಿಡ್‌ ಆಗಿ ಬಿದ್ದಿದ್ದ 20 ವರ್ಷ ಪ್ರಾಯದ ಬೈಕ್‌ ಸವಾರ ತೇಜಸ್ವಿ ಗೌಡ  ಮೇಲೆ ಲಾರಿ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next