Advertisement

ಸಿಎಂ ಸಿದ್ದರಾಮಯ್ಯ ಜಾತಿವಾದಿ: ಬಿಎಸ್‌ವೈ

07:00 AM Dec 30, 2017 | Team Udayavani |

ತೀರ್ಥಹಳ್ಳಿ: ಹಣ, ತೋಳು ಬಲ, ಅಧಿಕಾರ ಬಲ ಮತ್ತು ಜಾತಿ, ಧರ್ಮಗಳನ್ನು ಒಡೆದಾಳುವ ಮೂಲಕ ನೆಮ್ಮದಿಯಿಂದ ಇದ್ದ ಸಮಾಜದ ಸಾಮರಸ್ಯ ಕದಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ತಾವು ಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ನಿಜವಾಗಿ ಜಾತಿವಾದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

Advertisement

ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಉಳುವವನೇ ಹೊಲದೊಡೆಯ ಎಂದ ದೇವರಾಜ ಅರಸು ಹಿಂದುಳಿದ ಜಾತಿ, ವರ್ಗಗಳನ್ನು ಪ್ರಾಮಾಣಿಕವಾಗಿ ಮೇಲೆತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರ ಸಮಾಜವಾದ ಕೇವಲ ಅ ಧಿಕಾರ ಮಾತ್ರ ಪಡೆಯಲು ಕೇಂದ್ರೀಕೃತವಾಗಿದೆ. ರಾಜ್ಯದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ದೊರಕುತ್ತಿರುವ ಬೆಂಬಲ ಕಂಡು ಅವರು ವಿಚಲಿತರಾಗಿದ್ದಾರೆ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ನ ಆಳ್ವಿಕೆಯಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ. ಸಿದ್ದರಾಮಯ್ಯರ ದುರಾಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯಿಂದಾಗಿ ಕಾಂಗ್ರೆಸ್‌ ತನ್ನ ಕೊನೆಗಾಲವನ್ನು ಸಮೀಪಿಸಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವುದು ಶತಃಸಿದ್ಧ. ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡುವುದು ನಮ್ಮ ಗುರಿ. ಸಿದ್ದರಾಮಯ್ಯನವರು ಅಚ್ಛೇ ದಿನ್‌ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಚ್ಛೇ ದಿ ನ್‌ ಬಂದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮನೆಗೆ ಹೋದ ದಿನ ಅಚ್ಛೇ ದಿ ನ್‌ ಬರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next