Advertisement
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ,”ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರನ್ನು ನನಗಿಂತಲೂ ಹೆಚ್ಚು 60 ಸಾವಿರ ಮತಗಳ ಲೀಡ್ ಕೊಟ್ಟು ಗೆಲ್ಲಿಸಬೇಕು. ಆಗ ಯಾರೂ ನನ್ನನ್ನು ಮುಟ್ಟಲು ಆಗಲ್ಲ, ನಾನು ಇರಬೇಕಾ, ಬೇಡವಾ? ನಾನು ಇರಬೇಕು ಅಂದರೆ 60 ಸಾವಿರ ಲೀಡ್ ಕೊಡಿ” ಎಂದು ಒತ್ತಿ ಹೇಳಿದ್ದಾರೆ.
ಸ್ವಕ್ಷೇತ್ರದಲ್ಲಿ ಸಿಎಂ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಹೈಕಮಾಂಡ್ ಸಿಎಂ ಸೇರಿ ಸಚಿವರೆಲ್ಲರಿಗೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವ ಟಾಸ್ಕ್ ನೀಡಿದ್ದು, ವಿಫಲವಾದಲ್ಲಿ ಬದಲಾವಣೆಯ ಸೂಚನೆಯನ್ನೂ ನೀಡಿದೆ ಎನ್ನಲಾಗಿದೆ.ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಟಕ್ಕಿಳಿದು ನಾನಾ ರಣತಂತ್ರಗಳನ್ನು ಹಣೆಯುತ್ತಿದ್ದಾರೆ.