Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಅಥವಾ ನಾಯಕತ್ವ ಬದಲಾವಣೆ ಬಗ್ಗೆ ಕೇಂದ್ರದಲ್ಲಿ ಪಕ್ಷದ ಶಾಸಕಾಂಗ ಸಭೆ ಅಥವಾ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಯೇ ಆಗಿಲ್ಲ. ಮುಂದಿನ ಎರಡೂವರೆ ವರ್ಷ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ, ನಾಯಕ ಆಗಿರುತ್ತಾರೆ. ಮಂತ್ರಿ ಮಂಡಲ ವಿಚಾರದಲ್ಲೂ ಸಿಎಂ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಆ ವಿಷಯದಲ್ಲಿ ಪಕ್ಷ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
Related Articles
Advertisement
ಪ್ರಧಾನಿಗೆ 16 ಪ್ರಶಸ್ತಿ: ದೇಶದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ಸ್ವತ್ಛ ಭಾರತ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2020 ರಲ್ಲಿ ವಿವಿಧ ದೇಶಗಳಿಂದ ವಿಶ್ವಮಟ್ಟದಲ್ಲಿ 16 ಪ್ರಶಸ್ತಿಗಳು ಬಂದಿವೆ. ವಿಶ್ವದ ಶ್ರೀಮಂತ ದೇಶಗಳನ್ನು ಕೊರೊನಾ ಬಾಧಿಸಿದಾಗ ಭಾರತದಲ್ಲಿ ಮಾತ್ರ ಸಮರ್ಥ ನಿರ್ವಹಣೆ ಮೂಲಕ ನಿಯಂತ್ರಣಕ್ಕೆ ತರುವಲ್ಲಿ ಮೋದಿ ಯಶಸ್ವಿಯಾದರು ಎಂದು ಬಣ್ಣಿಸಿದರು.
ಎಸ್‌ಡಿಪಿಐ ರಾಷ್ಟ್ರ ವಿರೋಧಿ ಘೋಷಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಈ ಸಂಬಂಧ ಕೆಲವರ ಬಂಧನಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಗೆಲುವಿನ ಹುಮ್ಮಸ್ಸಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಬಗ್ಗೆ ಪಕ್ಷದ ವತಿಯಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದರು.
ಬಿಜೆಪಿ ಆಪರೇಷನ್ ಕಮಲ ಆಮಿಷದ ಬಗ್ಗೆ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಅದರ ಬಗ್ಗೆ ಚರ್ಚೆ ಬೇಡ, ನ್ಯಾಯಾಲಯದಲ್ಲೇ ತೀರ್ಪು ಬರಲಿ ಎಂದು ಸ್ಪಷ್ಟಪಡಿಸಿದರು.
ಅಡುಗೆ ಅನಿಲ, ಇಂಧನಗಳ ದರ ಏರಿಳಿತ ವಿದೇಶದಲ್ಲಿ ಅವುಗಳ ದರವನ್ನು ಅವಲಂಬಿಸಿದೆ. ಇದನ್ನು ಕಾಲ ಕಾಲಕ್ಕೆ ನಿಯಂತ್ರಿಸಲು ನಮ್ಮ ದೇಶದಲ್ಲಿ ಹತ್ತಾರು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು. ಸಚಿವ ಕೆ.ಎಸ್. ಈಶ್ವರಪ್ಪ, ಪಕ್ಷದ ವಕ್ತಾರ ಗಣೇಶ್ ಕಾರ್ಣಿಕ್, ಮಹೇಶ್ ಟೆಂಗಿನಕಾಯಿ ಇದ್ದರು.