ವೇಣುಗೋಪಾಲ್ ಮಧ್ಯಪ್ರವೇಶಿಸಿ ಸರಳ ಸಂಧಾನ ಸೂತ್ರದ ಮೂಲಕ ಶಮನಗೊಳಿಸಿದ್ದಾರೆ.
Advertisement
ಕಾಂಗ್ರೆಸ್ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಹಾಗೂ ಪಕ್ಷದ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಮುಂದಾಳತ್ವದಲ್ಲಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಸಚಿವ ಡಿ.ಕೆ ಶಿವಕುಮಾರ್ ಒಡಗೂಡಿ ಪ್ರವಾಸ ನಡೆಸುವಂತೆ ತಿಳಿಸಿದ್ದಾರೆ.
ಭೇಟಿ ನೀಡದಿರುವ ,ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪಕ್ಷದಿಂದ ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಪ್ರವಾಸ
ನಡೆಯಲಿದೆ. ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಈ ಪ್ರವಾಸದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ.
Related Articles
Advertisement
ಮುಖ್ಯಮಂತ್ರಿಯವರ ಸರ್ಕಾರಿ ಯಾತ್ರೆಗೆ ಅಪಸ್ವರ ಎತ್ತಿದ್ದ ಪರಮೇಶ್ವರ್, ಈ ಸೂತ್ರದಿಂದ ಖುಷಿಯಾಗಿದ್ದಾರೆಂದು ಹೇಳಲಾಗಿದೆ. ಡಿಸೆಂಬರ್ ಕೊನೆ ವಾರದಲ್ಲಿ ಪ್ರವಾಸ ನಡೆಸಲು ವೇಣುಗೋಪಾಲ್ ಗ್ರೀನ್ ಸಿಗ್ನಲ್ ನೀಡಿದ್ದು, ಮುಖ್ಯಮಂತ್ರಿ ಪ್ರವಾಸ ಮಾಡುವ ಕ್ಷೇತ್ರಗಳನ್ನು ಹೊರತು ಪಡಿಸಿ ವಿಶೇಷವಾಗಿ ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ, ಪಕ್ಷದ ಸ್ಥಿತಿಗತಿ ಮತ್ತು ಆಕಾಂಕ್ಷಿಗಳ ಬಗ್ಗೆ ಕ್ಷೇತ್ರಗಳಲ್ಲಿ ಜನರಿಗಿರುವ ಅಭಿಪ್ರಾಯದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಕ್ಷೇತ್ರಗಳ ಪ್ರವಾಸ ಮುಕ್ತಾಯಗೊಳಿಸಿ, ಬೂತ್ ಮಟ್ಟದ ಕಾರ್ಯಕರ್ತರು, ಏಜೆಂಟರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯ ಕ್ರಮವನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಬಜೆಟ್ ನಂತರ ಯಾತ್ರೆ ಇನ್ನು ಬಜೆಟ್ ಅಧಿವೇಶನ ಮುಗಿದ ಬಳಿಕ ಸಿಎಂ ಹಾಗೂ ಪರಮೇಶ್ವರ್ ಜೊತೆಯಾಗಿಯೇ ಪಕ್ಷದ ಪರವಾಗಿ ಯಾತ್ರೆ ನಡೆಸುವಂತೆ ವೇಣುಗೋಪಾಲ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.1 ರಿಂದ ಜನಾಶೀರ್ವಾದ ಯಾತ್ರೆ ಮಾಡುವುದಾಗಿ ಹೇಳಿರುವುದರಿಂದ ಆ ಯಾತ್ರೆಯನ್ನು ಪಕ್ಷದ ವತಿಯಿಂದಲೇ ನಡೆಸುವಂತೆ ಸೂಚಿಸಿದ್ದಾರೆ.
ಸಂಕ್ರಾಂತಿಗೆ ಸಮೀಕ್ಷೆ: ಪಕ್ಷದ ವತಿಯಿಂದ ಈಗಾಗಲೇ ನಡೆಸುತ್ತಿರುವ ಸಮೀಕ್ಷೆಯನ್ನು ಜ.15ರೊಳಗೆ ಪೂರ್ಣಗೊಳಿಸಿ ಸ್ಪಷ್ಟ ಚಿತ್ರಣ ಪಡೆಯುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ಸೋಲಿನ ಆತಂಕ ಎದುರಿಸುತ್ತಿರುವ ಹಾಲಿ ಶಾಸಕರು ಜ.15ರೊಳಗೆ ಕ್ಷೇತ್ರದಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡುವಂತೆ ಸಂದೇಶ ರವಾನೆ ಮಾಡುವುದು, ಸಮೀಕ್ಷೆಯಲ್ಲೂ ಸೋಲುತ್ತಾರೆ ಎಂಬ ಮಾಹಿತಿ ಬಂದರೆ ಪರ್ಯಾಯ ಅಭ್ಯರ್ಥಿಯನ್ನು ಸಿದಟಛಿ ಮಾಡಿಕೊಳ್ಳಬೇಕು ಎನ್ನುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ನಾವು ಪ್ರವಾಸ ಕೈಗೊಳ್ಳಲಿದ್ದೇವೆ. ಬಹುತೇಕ ಡಿ.20 ರಿಂದ ಪ್ರವಾಸ ಆರಂಭವಾಗಲಿದೆ. ಅಧಿಕೃತ ವೇಳಾಪಟ್ಟಿ ಶೀಘ್ರವೇ ಸಿದ್ದವಾಗಲಿದೆ. ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗದಿರುವುದರಿಂದ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ.– ಎಸ್.ಆರ್. ಪಾಟೀಲ್,
ಕೆಪಿಸಿಸಿ ಕಾರ್ಯಾಧ್ಯಕ್ಷ